Thursday, April 25, 2024
Homeಕ್ರೀಡೆ36 ವರ್ಷಗಳ ಬಳಿಕ ಫಿಫಾ ವಿಶ್ವಕಪ್  ಕಿರೀಟ ಮುಡಿಗೇರಿಸಿಕೊಂಡ ಅರ್ಜೆಂಟೀನಾ

36 ವರ್ಷಗಳ ಬಳಿಕ ಫಿಫಾ ವಿಶ್ವಕಪ್  ಕಿರೀಟ ಮುಡಿಗೇರಿಸಿಕೊಂಡ ಅರ್ಜೆಂಟೀನಾ

spot_img
- Advertisement -
- Advertisement -

ನ್ಯೂಸ್ ಡೆಸ್ಕ್; ಲುಸೈಲ್ ಸ್ಟೇಡಿಯಮ್‌ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ಫಿಫಾ ವಿಶ್ವಕಪ್  ಕಿರೀಟ ಮುಡಿಗೇರಿಸಿಕೊಂಡಿದೆ. ಫ್ರಾನ್ಸ್‌ ತಂಡವನ್ನು ಮಣಿಸಿದ ಅರ್ಜೆಂಟೀನಾ ತಂಡ 36 ವರ್ಷಗಳ ಬಳಿಕ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ‌.

ಲುಸೈಲ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ನಿಗದಿತ ಸಮಯ ಹಾಗೂ ಹೆಚ್ಚುವರಿ ಸಮಯದ ಅಂತ್ಯಕ್ಕೆ ಪಂದ್ಯ 3-3 ಗೋಲುಗಳಿಂದ ಸಮಬಲ ಕಂಡ ಕಾರಣಕ್ಕೆ ಪೆನಾಲ್ಟಿ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. 1986ರಲ್ಲಿ ಕೊನೆಯ ಬಾರಿ ಪ್ರಶಸ್ತಿ ಜಯಿಸಿದ್ದ ಅರ್ಜೆಂಟೀನ ಈಗ 3ನೇ ಬಾರಿ ವಿಶ್ವ ಚಾಂಪಿಯನ್‌ಪಟ್ಟಕ್ಕೇರಿದೆ.

ಮೆಸ್ಸಿ ತನ್ನ ಕೊನೆಯ ಪಂದ್ಯದಲ್ಲಿ ವಿಶ್ವಕಪ್‌ಗೆ ಮುತ್ತಿಟ್ಟಿದ್ದು, ವಿಶ್ವಕಪ್‌ನಲ್ಲಿ ಯುರೋಪ್ ತಂಡಗಳ ಪ್ರಾಬಲ್ಯ ಮುರಿದಿರುವ ಅರ್ಜೆಂಟೀನ 2002ರ ಬಳಿಕ ವಿಶ್ವಕಪ್ ಗೆದ್ದ ಮೊದಲ ದಕ್ಷಿಣ ಅಮೆರಿಕ ತಂಡ ಎನಿಸಿಕೊಂಡಿದೆ. ಅರ್ಜೆಂಟೀನ ಈ ಹಿಂದೆ 1978 ಹಾಗೂ 1986ರಲ್ಲಿ ಪ್ರಶಸ್ತಿ ಜಯಿಸಿತ್ತು. ವಿಶ್ವಕಪ್‌ನಲ್ಲಿ ಫ್ರಾನ್ಸ್ 2006ರ ಬಳಿಕ 2ನೇ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಮೊದಲ ಅವಧಿಯ ಆಟದಲ್ಲಿ ಅರ್ಜೆಂಟೀನಾ ಎರಡು ಗೋಲು ಬಾರಿಸಿದರೆ, ಪಂದ್ಯದ ಕೊನೆಯ ಹಂತದಲ್ಲಿ ಒಂದೇ ನಿಮಿಷ ಅಂತರದಲ್ಲಿ ಫ್ರಾನ್ಸ್‌ನ ಕೈಲಿಯನ್‌ ಎಂಬಾಪೆ ಮಿಂಚಿನ ಸಂಚಾರ ಮಾಡಿದಂತೆ ಎರಡು ಗೋಲು ಸಿಡಿಸಿ ಫ್ರಾನ್ಸ್‌ ತಂಡದ ಸಮಬಲಕ್ಕೆ ಕಾರಣರಾಗಿದ್ದರು. ಪಂದ್ಯದ 23ನೇ ನಿಮಿಷದಲ್ಲಿ ಲಿಯೋನೆಲ್‌ ಮೆಸ್ಸಿ ಅರ್ಜೆಂಟೀನಾ ಪರವಾಗಿ ಗೋಲು ಬಾರಿಸಿದ್ದರೆ, ಅದಾದ ಕೆಲವೇ ನಿಮಿಷಗಳಲ್ಲಿ ಏಂಜೆಲ್‌ ಡಿ ಮಾರಿಯಾ ಗೋಲು ಸಿಡಿಸಿ ಅರ್ಜೆಂಟೀನಾದ ಸಂಭ್ರಮಕ್ಕೆ ಕಾರಣರಾಗಿದ್ದರು. ಈ ಮುನ್ನಡೆಯನ್ನು ಅರ್ಜೆಂಟೀನಾ ಮೊದಲ ಅವಧಿ ಮುಗಿಯುವವರೆಗೂ ಕಾಯ್ದುಕೊಂಡಿತ್ತು.

- Advertisement -
spot_img

Latest News

error: Content is protected !!