Friday, June 5, 2026
Homeಕರಾವಳಿಬಂಟ್ವಾಳ; ಅಟ್ಟದಲ್ಲಿ ಶೇಖರಿಸಿಟ್ಟ 11 ಚೀಲ ಅಡಿಕೆ ಕಳವು

ಬಂಟ್ವಾಳ; ಅಟ್ಟದಲ್ಲಿ ಶೇಖರಿಸಿಟ್ಟ 11 ಚೀಲ ಅಡಿಕೆ ಕಳವು

- Advertisement -
- Advertisement -

ಬಂಟ್ವಾಳ; ಅಟ್ಟದಲ್ಲಿ ಶೇಖರಿಸಿಟ್ಟ 11 ಚೀಲ ಅಡಿಕೆ ಕಳವು ಮಾಡಿರುವ ಘಟನೆ ಬಂಟ್ವಾಳ ಬೈಪಾಸ್‌ ರಸ್ತೆಯ ಕೆ. ಜಿನಚಂದ್ರ ಜೈನ್‌ ಅವರು ಮನೆಯಲ್ಲಿ ನಡೆದಿದೆ.


ಬೈಪಾಸ್‌ ನಿವಾಸಿ ಕೆ. ಜಿನಚಂದ್ರ ಜೈನ್‌ ಅವರು ಸುಮಾರು 3 ಕ್ವಿಂಟಾಲ್‌ ಅಡಿಕೆಯನ್ನು ಒಣಗಿಸಿ 11 ಚೀಲಗಳಲ್ಲಿ ತುಂಬಿಸಿ ಮನೆಯ ಅಟ್ಟದಲ್ಲಿಟ್ಟಿದ್ದರು.ಮಾ. 1ರಂದು ಮನೆಗೆ ಬೀಗ ಹಾಕಿ ಹೋಗಿದ್ದು, 2ರಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ.

ಕಳವಾದ ಅಡಿಕೆಯ ಮೌಲ್ಯ 60 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!