Sunday, June 14, 2026
Homeಕರಾವಳಿಬೆಳ್ತಂಗಡಿ; ಇಳಂತಿಲ ಶಾಲೆಯಲ್ಲಿ ಕೊಠಡಿ ಬೀಗ ಮುರಿದು ಹಣ ಕಳ್ಳತನ

ಬೆಳ್ತಂಗಡಿ; ಇಳಂತಿಲ ಶಾಲೆಯಲ್ಲಿ ಕೊಠಡಿ ಬೀಗ ಮುರಿದು ಹಣ ಕಳ್ಳತನ

- Advertisement -
- Advertisement -

ಬೆಳ್ತಂಗಡಿ; ಶಾಲಾ  ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಶಾಲೆಯ ಕಪಾಟಿ ನಲ್ಲಿ ಇಟ್ಟಿದ್ದ ಹಣವನ್ನು ಕಳ್ಳತನ‌ ಮಾಡಿದ ಘಟನೆ  ಇಳಂತಿಲದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲಾ ಮುಖ್ಯೋಪಾಧ್ಯಾಯಿನಿ  ಗುರುವಾರ ಬೆಳಿಗ್ಗೆ ಶಾಲೆಗೆ ಬಂದು ನೋಡಿದಾಗ ಶಾಲೆಯ ಕಛೇರಿ ಕೊಠಡಿಯ ಬಾಗಿಲಿನ‌ ಬೀಗ ಮುರಿದು  ಒಳನುಗ್ಗಿರುವುದು ಕಂಡು ಬಂದಿದೆ. ಒಳಗೆ ನೋಡಿದಾಗ ಕಪಾಟಿನ ಬೀಗ ಒಡೆದಿದ್ದು ಅದರಲ್ಲಿ ಇರಿಸಲಾಗಿದ್ದ ರೂ 1,500 ಹಣವನ್ನು ಕಳವು ಮಾಡಿರುವುದು ಗೊತ್ತಾಗಿದೆ. ಈ ಬಗ್ಗೆ  ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.  ಸ್ಥಳಕ್ಕೆ  ಉಪ್ಪಿನಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!