- Advertisement -
- Advertisement -
ಉಡುಪಿಯ ಅಪರ ಜಿಲ್ಲಾಧಿಕಾರಿಯಾಗಿ ಅಬೀದ ಗದ್ಯಾಳ ನೇಮಕವಾಗಿದ್ದಾರೆ.
ಅಬೀದ ಗದ್ಯಾಳ ವಿಜಯಪುರ ಜಿಲ್ಲೆ ಇಂಡಿ ಉಪವಿಭಾಗದ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿಯಾಗಿರುವ ಅಬೀದ ಗದ್ಯಾಳ ಅವರನ್ನು ಖಾಲಿ ಇರುವ ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ಸರ್ಕಾರ ವರ್ಗಾಯಿಸಿದೆ.
ಕಳೆದೊಂದು ವರ್ಷಕ್ಕೂ ಅಧಿಕ ಸಮಯ ಉಡುಪಿ ಎಡಿಸಿಯಾಗಿ ಕಾರ್ಯ ನಿರ್ವಹಿಸಿದ್ದ ಮಮತಾದೇವಿ ಅವರನ್ನು ಕಳೆದ ತಿಂಗಳು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಇದೀಗ ಅಬೀದ ಗದ್ಯಾಳ ಅವರನ್ನು ಖಾಲಿ ಇರುವ ಉಡುಪಿ ಅಪರ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಿದೆ.
- Advertisement -