- Advertisement -
- Advertisement -
ಮಂಗಳೂರು: ಪರೀಕ್ಷೆ ಬರೆದು ಮನೆಗೆ ಬಂದ ಯುವಕ ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿರುವ ಘಟನೆ ಮೂಡುಪೆರಾರ ಗ್ರಾಮದ ಅರಕೆಪದವು ಎಂಬಲ್ಲಿ ನಡೆದಿದೆ. ಅರಕೆಪದವು ಹೌಸ್ ನಿವಾಸಿ ನಿತೇಶ್ ಬೆಳ್ಚಡ (19) ನಾಪತ್ತೆಯಾದ ಯುವಕ.
ಮಂಗಳೂರು ಸಮೀಪ ಪರೀಕ್ಷೆಗೆ ಹಾಜರಾಗಿ ಮನೆಗೆ ಬಂದ ನಿತೇಶ್ ಬಳಿಕ ಮನೆಯಿಂದ ತೆರಳಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಕಾಣೆಯಾದ ಯುವಕನ ವಿವರ: ಮುಖ-ದುಂಡುಮುಖ, ಗುಂಗುರು ಕೂದಲು, ಎತ್ತರ- 5.5 ಅಡಿ, ಬಟ್ಟೆ- ಇಂಗ್ಲೀಷ ಅಕ್ಷರಗಳಿರುವ ಕೆಂಪು ಬಣ್ಣದ ಟಿ-ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.
ಯುವಕನನ್ನು ಎಲ್ಲಿಯಾದರೂ ಕಂಡು ಬಂದಲ್ಲಿ ಬಜಪೆ ಪೊಲೀಸ್ ಠಾಣೆಯ 9448622610, 08242220531 ನಂಬ್ರಗೆ ಕರೆ ಮಾಡಿ ಮಾಹಿತಿ ನೀಡಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
- Advertisement -