Saturday, May 4, 2024
Homeಮನರಂಜನೆಸಿನಿ ರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ನಟಿ ಅನುಷ್ಕಾ ಶೆಟ್ಟಿ

ಸಿನಿ ರಂಗದಲ್ಲಿ 15 ವರ್ಷಗಳನ್ನು ಪೂರೈಸಿದ ನಟಿ ಅನುಷ್ಕಾ ಶೆಟ್ಟಿ

spot_img
- Advertisement -
- Advertisement -

ಹೈದಾರಾಬಾದ್ : ಕರಾವಳಿ ಚೆಲುವೆ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಅವರು ತಮ್ಮ ಸಿನಿ ಜರ್ನಿಯಲ್ಲಿ 15 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಹಾಗಾಗಿ ಸ್ವೀಟಿ ಅಭಿಮಾನಿಗಳು ಅವರಿಗೆ ಶುಭಾಶಯಗಳ ಸುರಿ ಮಳೆಗೈಯುತ್ತಿದ್ದಾರೆ.

ಆರಂಭದಲ್ಲಿ ಗ್ಲಾಮರ್​ ಬೊಂಬೆಯಾಗಿಯೇ ಚಿತ್ರರಂಗದಲ್ಲಿ ಗುರ್ತಿಸಿಕೊಂಡ ಅನುಷ್ಕಾ, ಅರುಂಧತಿಯಾಗಿ ಜಾದೂ ಮಾಡಿದರು. ಅಲ್ಲಿಂದ ಮುಂದೆ ಅನುಷ್ಕಾ ಶೆಟ್ಟಿಗಂತ್ಲೇ ವಿಶೇಷ ಕಥೆಗಳು ಸಿದ್ಧವಾದ್ವು. ನಂಗೆ ಗ್ಲಾಮರ್​ ಬೊಂಬೆಯಾಗಿ ಕುಣಿಯೋದು ಗೊತ್ತು, ಅದ್ಭುತ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡೋಕು ಗೊತ್ತು ಅಂತ ಸಾಬೀತು ಪಡಿಸಿದರು. ಅಲ್ಲಿಂದ ಮುಂದೆ ಸ್ವೀಟಿ ಹವಾ ಶುರುವಾಯ್ತು.

ಮಂಗಳೂರಿನ ಮಲ್ಲಿಗೆ ಅನುಷ್ಕಾ ಶೆಟ್ಟಿ. ಬಂಟರ ಮನೆಯ ಪ್ರಫುಲ್ಲಾ ಹಾಗೂ ಎ.ಎನ್ ವಿಠಲ್ ಶೆಟ್ಟಿ ದಂಪತಿ ಮುದ್ದಿನ ಮಗಳು ಬೆಳೆದಿದ್ದೆಲ್ಲ ನಮ್ಮ ಬೆಂಗಳೂರಿನಲ್ಲಿ. ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಬಿಸಿಎ ಪದವಿ ಪಡೆದುಕೊಂಡ ಅನುಷ್ಕಾ ಶೆಟ್ಟಿ ಜೀವನದಲ್ಲಿ ಬದಲಾವಣೆ ತಂದಿದ್ದು ಯೋಗಾಭ್ಯಾಸ. ಸ್ವೀಟಿಯ ಕಡೆದಿಟ್ಟ ಸುಂದರ ಶಿಲ್ಪದಂತಿರೋ ಚೆಲುವಿನ ಗುಟ್ಟು ಇದೇ ಯೋಗ.

ಬೆಂಗಳೂರಿನಲ್ಲಿ ಯೋಗ ಶಿಕ್ಷಕಿಯಾಗಿದ್ದ ಅನುಷ್ಕಾ ಟಾಲಿವುಡ್ ಸ್ಟಾರ್ ಡೈರೆಕ್ಟರ್ ಕಣ್ಣಿಗೆ ಬಿದ್ದು, ಸೂಪರ್ ಸಿನಿಮಾದಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಂಡರು. ಸ್ವೀಟಿ ಅಭಿನಯದ ಸೂಪರ್​ ಸಿನಿಮಾ ರಿಲೀಸ್​ ಆಗಿ 15 ವರ್ಷ ಕಳೆದಿದೆ. ಅರ್ಥಾತ್​ ಸ್ವೀಟಿ ಸಿನಿ ಕರಿಯರ್​ಗೂ ಈಗ 15 ವರ್ಷ. ಗ್ಲಾಮರ್​ ಗೊಂಬೆಯಾಗಿ ಮಾತ್ರವಲ್ಲದೇ ಅಭಿನಯಕ್ಕೆ ಅವಕಾಶವಿರುವ ಸಿನಿಮಾಗಳಲ್ಲಿ ಅನುಷ್ಕಾ ನಟಿಸಿ ಗೆದ್ದಿದ್ದಾರೆ. ವೇದಂ, ಅರುಂಧತಿ, ಭಾಗಮತಿ, ರುದ್ರಮದೇವಿ, ಬಾಹುಬಲಿ ಸಿನಿಮಾಗಳು ಕರಾವಳಿ ಚೆಲುವೆಗೆ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಡ್ತು.

ಅನುಷ್ಕಾ ಶೆಟ್ಟಿ ಅಭಿನಯದ ಸೈಲೆನ್ಸ್​ ಸಿನಿಮಾ ರಿಲೀಸ್​ಗೆ ರೆಡಿಯಿದೆ.

ಇತ್ತೀಚೆಗೆ ಅನುಷ್ಕಾ ಹೊಸ ಸಿನಿಮಾಗಳನ್ನ ಒಪ್ಪಿಕೊಳ್ತಿಲ್ಲ. ದೇಹ ತೂಕ ಹೆಚ್ಚಾಗಿದ್ದರಿಂದ ಒಂದಷ್ಟು ಅವಕಾಶಗಳು ಮಿಸ್​ ಆಯ್ತು ಅಂತಲೂ ಸುದ್ದಿಯಾಗಿತ್ತು.. ಸ್ವೀಟಿ ಮತ್ತೆ ಸಣ್ಣಗಾಗಿ ಪ್ರೇಕ್ಷಕರನ್ನ ರಂಜಿಸೋ ಸುಳಿವು ಕೊಟ್ಟಿದರು. ಮತ್ತೊಂದ್ಕಡೆ ಅನುಷ್ಕಾ ಶೆಟ್ಟಿ ನಿಧಾನವಾಗಿ ಚಿತ್ರರಂಗದಿಂದ ದೂರಾಗುತ್ತಿದ್ದಾರೆ ಅನ್ನುವ ಗುಸುಗುಸು ಕೂಡ ಇದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸ್ವೀಟಿ ಅಭಿನಯದ ಸೈಲೆನ್ಸ್​ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವ ಸುಳಿವು ಸಿಕ್ತಿದೆ.

- Advertisement -
spot_img

Latest News

error: Content is protected !!