Thursday, May 9, 2024
Homeತಾಜಾ ಸುದ್ದಿಹಿಂದೂ ಧರ್ಮದ ಪಾವಿತ್ರ್ಯತೆಗೆ ಅವಮಾನ: ಭಾರಿ ವಿವಾದಕ್ಕೆ ಕಾರಣವಾಯ್ತ ಈ ದಂಪತಿಗಳ ಪೋಟೊಶೂಟ್!

ಹಿಂದೂ ಧರ್ಮದ ಪಾವಿತ್ರ್ಯತೆಗೆ ಅವಮಾನ: ಭಾರಿ ವಿವಾದಕ್ಕೆ ಕಾರಣವಾಯ್ತ ಈ ದಂಪತಿಗಳ ಪೋಟೊಶೂಟ್!

spot_img
- Advertisement -
- Advertisement -

ಕೇರಳ: ಫ್ರೀ ವೆಡ್ಡಿಂಗ್ ಪೋಟೊಶೂಟ್ ಹಾಗೂ ಕಾನ್ಸೆಪ್ಟ್ ಪೋಟೋ ಶೂಟ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮಲೆಯಾಳಂ ಚಲನಚಿತ್ರರಂಗದ ಎವರ್ ಗ್ರೀನ್ ಹಿಟ್ ಚಿತ್ರ ವೈಶಾಲಿಯ ಪಾತ್ರದ ಪ್ರೇರಣೆಯಿಂದ ಮಾಡಿರುವ ಈ ಪೋಟೋ ಶೂಟ್ ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲದಿನಗಳ‌ ಹಿಂದೆ ಕೇರಳದ ಜೋಡಿಯೊಂದು ಕಾಫಿ ತೋಟದಲ್ಲಿ ನಡೆಸಿದ್ದ ಪೋಸ್ಟ್ ವೆಡ್ಡಿಂಗ್ ಹಸಿಬಿಸಿ ಪೋಸಿನ ಪೋಟೋ ಶೂಟ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಕೇರಳದ ಮತ್ತೊಂದು ಜೋಡಿ ನಡೆಸಿದ ಫ್ರೀ ವೆಡ್ಡಿಂಗ್ ಪೋಟೊಶೂಟ್ ಹಾಗೂ ಕಾನ್ಸೆಪ್ಟ್ ಹಿಂದೂ ಧರ್ಮಿಯರ ಕಣ್ಣು ಕೆಂಪಾಗಿಸಿದೆ.

ಋಷಿ ಹಾಗೂ ಋಷಿಮಾತೆಯಂತೆ ವೇಷಭೂಷಣ ಧರಿಸಿದ ಜೋಡಿಯೊಂದು ನದಿತೀರ,ಕಾಡಿನಲ್ಲಿ ರೋಮ್ಯಾನ್ಸ್ ಮಾಡುತ್ತಿರುವಂತೆ ಪೋಸು ನೀಡಿ ಪೋಟೋಶೂಟ್ ಮಾಡಿಸಲಾಗಿದೆ. ಆದರೇ ಈ ಪೋಟೋ ಶೂಟ್ ನಲ್ಲಿ ಹಿಂದು ಧರ್ಮಿಯರಿಗೆ ಪವಿತ್ರವಾದ ಋಷಿ ಪರಂಪರೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಋಷಿಯಂತೆ ವೇಷಭೂಷಣ ಧರಿಸಿದ ಈ ಯುವ ಜೋಡಿ ತೀರಾ ಕೀಳುಮಟ್ಟದ ಭಾವಾಭಿವ್ಯಕ್ತಿ‌ ನೀಡಿದ್ದು ಪೋಟೋಸ್ ವೈರಲ್ ಆಗುತ್ತಿದ್ದಂತೆ ಜನ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೋಟೋಶೂಟ್ ಹೆಸರಿನಲ್ಲಿ ಹಿಂದೂ ಧರ್ಮಿಯರ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಈ ಜೋಡಿ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಕೇರಳದ ರಿಗ್ವೆದಾ ಬೂಟಿಕ್ ಸಹಯೋಗದಲ್ಲಿ ನಡೆದ ಈ ಪೋಟೋಶೂಟ್ ನಲ್ಲಿ 1988 ರಲ್ಲಿ ‌ಮಲೆಯಾಳಂನಲ್ಲಿ ರಿಲೀಸ್ ಆದ ವೈಶಾಲಿ ಚಿತ್ರದ ಕಾನ್ಸೆಪ್ಟ್ ಬಳಸಲಾಗಿದೆ ಎನ್ನಲಾಗಿದೆ. ಪೋಟೋಗ್ರಾಫರ್ ಮಿಧುನ್ ಸರ್ಕಾರ್ ಅವರು ತೆಗೆದಿರುವ ಈ ಪೋಟೋಶೂಟ್ ನಲ್ಲಿ ಪಾಲ್ಗೊಂಡ ಜೋಡಿ ಅಭಿಜಿತ್ ಹಾಗೂ ಜಿತು ಮಕ್ಕು ಮಾಯಾ ಎಂದು ಹೇಳಲಾಗಿದ್ದು, ಇವರು ಮದುವೆಯಾಗಲಿರೋ ಜೋಡಿಯೋ ಅಥವಾ ಫ್ರಿ ವೆಡ್ಡಿಂಗ್ ಶೂಟ್ ಗಾಗಿ ಪೋಸು ಕೊಟ್ಟ ಆರ್ಟಿಸ್ಟ್ ಗಳೋ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

- Advertisement -
spot_img

Latest News

error: Content is protected !!