ಕಡಬ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಅವರನ್ನು ವರ್ಗಾವಣೆ ದಿಢೀರ್ ವರ್ಗಾವಣೆ ಮಾಡಲಾಗಿದ್ದು,ನೂತನ ಎಸ್.ಐ. ಆಗಿ ಮೈಸೂರು ಮೂಲದ ಅಭಿನಂದನ್ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈ ದಿಢೀರ್ ವರ್ಗಾವಣೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ವರ್ಗಾವಣೆಯಾಗಿರುವ ಎಸ್.ಐ ಆಂಜನೇಯ ರೆಡ್ಡಿಯವರಿಗೆ ಕರ್ತವ್ಯ ನಿರ್ವಹಿಸಲು ಸ್ಥಳವನ್ನು ಸೂಚಿಸಲಾಗಿಲ್ಲ, ಪುತ್ತೂರು ನಗರ ಅಥವಾ ಸಂಪ್ಯ ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗಬಹುದೆಂಬ ಮಾಹಿತಿ ಇದ್ದು ಖಚಿವಾಗಿಲ್ಲ.
ಇತ್ತೀಚೆಗೆ ಬಲ್ಯ ರಕ್ಷಿತಾರಣ್ಯದಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಹಿಂತಿರುಗುತ್ತಿದ್ದ ತಂಡವೊಂದನ್ನು ಎಸ್.ಐ ಆಂಜನೇಯ ರೆಡ್ಡಿ ನೇತೃತ್ವದ ತಂಡ ವಾಹನ ಸಹಿತ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಈ ಪ್ರಕರಣವೇ ವರ್ಗಾವಣೆಗೆ ಬಲವಾದ ಕಾರಣ ಎನ್ನಲಾಗುತ್ತಿದೆ.
ವೇಳೆ ಕಾಡಿನಲ್ಲಿ ಬೇಟೆಯಾಡಿ ತಂದಿದ್ದ ಮುಳ್ಳು ಹಂದಿ, ಬರಿಂಕ, ಬೆರು ಜಾತಿಯ ಪ್ರಾಣಿಗಳು ವಾಹನದಲ್ಲಿ ಪತ್ತೆಯಾಗಿತ್ತು ಕಾರಿನಲ್ಲಿ ಒಂದು ಕೋವಿ ಕೂಡ ಪತ್ತೆಯಾಗಿದ್ದು, ಬೇಟೆಯಾಡಿ ತಂದಿದ್ದ ಪ್ರಾಣಿಗಳ ಜತೆ ಕೋವಿ ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೂವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಬಳಿಕ ಜಾಮೀನು ಮೇಲೆ ಆರೋಪಿಗಳು ಬಿಡುಗೊಂಡಿದ್ದರು. ಮೂರು ದಿನಗಳ ಬಳಿಕ ನ್ಯಾಯಾಲದ ಅನುಮತಿ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಬೇಟೆಯಾಡಿದ ಪ್ರಾಣಿಗಳು ಶೆಡ್ಯೂಲ್ 1 ರಲ್ಲಿ ಬರುವ ಕಾಡು ಪ್ರಾಣಿಗಳಾಗಿದ್ದು, (ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳು ) ಅವುಗಳ ಬೇಟೆಯಾಡಿದ ಬಳಿಕವು ಆರೋಪಿಗಳಿಗೆ ತಕ್ಷಣ ಜಾಮೀನು ದೊರೆತಿದ್ದು ಪ್ರಾಣಿಪ್ರಿಯರ ನಿದ್ದೆಗೆಡುವಂತೆ ಮಾಡಿತ್ತು . ಎಸ್. ಐ ಕರ್ತವ್ಯ ಲೋಪ ಮಾಡಿದರೇ ಎನ್ನುವ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.