Saturday, June 27, 2026
Homeತಾಜಾ ಸುದ್ದಿಏರೋಸ್ಪೇಸ್ ಉದ್ಯಮಕ್ಕೆ ಜಮೀನು ಭೂಸ್ವಾಧೀನ ಕೈಬಿಟ್ಟ ಕರ್ನಾಟಕ; ಉದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದ ಆಂಧ್ರಪ್ರದೇಶ

ಏರೋಸ್ಪೇಸ್ ಉದ್ಯಮಕ್ಕೆ ಜಮೀನು ಭೂಸ್ವಾಧೀನ ಕೈಬಿಟ್ಟ ಕರ್ನಾಟಕ; ಉದ್ಯಮಿಗಳಿಗೆ ಮುಕ್ತ ಆಹ್ವಾನ ನೀಡಿದ ಆಂಧ್ರಪ್ರದೇಶ

- Advertisement -
- Advertisement -

ಬೆಂಗಳೂರು: ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್ ಗೆ ರೈತರ ಜಮೀನು ಭೂ ಸ್ವಾಧೀನದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈ ಜಮೀನು ಕೈ ಬಿಟ್ಟ ಬೆನ್ನಲ್ಲೇ
ವೈಮಾನಿಕ ಕ್ಷೇತ್ರದ ಉದ್ಯಮಿಗಳಿಗೆ ಆಂಧ್ರ ಪ್ರದೇಶ ಆಹ್ವಾನ ಕೊಟ್ಟಿದೆ.

ಆಂಧ್ರ ಪ್ರದೇಶದಲ್ಲಿ ಏರೋಸ್ಪೇಸ್ ಕ್ಷೇತ್ರಕ್ಕೆ ಸಚಿವ ನಾ ರಾ ಲೋಕೇಶ್ ಮುಕ್ತ ಆಹ್ವಾನ ನೀಡಿದ್ದು, ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನ ಬಳಿ ಉತ್ತಮ ಐಡಿಯಾ ಇದೆ, ನೀವು ಯಾಕೆ ಆಂಧ್ರಪ್ರದೇಶದತ್ತ ನೋಡಬಾರದು? ನಮ್ಮಲ್ಲಿ ಪ್ರೋತ್ಸಾಹ ಭರಿತ ಕೊಡುಗೆಯೊಂದಿಗೆ ಆಕರ್ಷಣೀಯವಾದ ಏರೋಸ್ಪೇಸ್ ಪಾಲಿಸಿ ಇದ್ದು,
ಬೆಂಗಳೂರಿನ ಹೊರವಲಯದಲ್ಲೇ ಉಪಯೋಗಿಸಲು ತಯಾರಾದ 8000 ಸಾವಿರ ಎಕರೆ ಭೂಮಿ ಇದೆ ಎಂದು ಸಚಿವ ಲೋಕೇಶ್ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.

ರೈತರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದೇವನಹಳ್ಳಿಯಲ್ಲಿ 1777 ಎಕರೆ ಕೃಷಿ ಭೂಮಿ ‌ಸ್ವಾಧೀನಪಡಿಸಿಕೊಳ್ಳುವ ತೀರ್ಮಾನವನ್ನು ಕೈಬಿಟ್ಟಿತ್ತು.

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಪುತ್ರನೂ ಆಗಿರುವ ನಾ ರಾ ಲೋಕೇಶ್ ಮಾಹಿತಿ ತಂತ್ರಜ್ಞಾನ, ಸಂವಹನ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗಳ ಸಚಿವರಾಗಿದ್ದಾರೆ.

- Advertisement -

Latest News

error: Content is protected !!