Saturday, June 1, 2024
Homeಕ್ರೀಡೆಟ್ರಾಕ್ಟರ್ ಖರೀದಿಸಿದ ರೌಂಡ್ಸ್ ಹಾಕಿದ ಎಂ.ಎಸ್. ಧೋನಿ.!.. 'ಡೌನ್ ಟು ಅರ್ಥ್' ಎಂದು ಕೊಂಡಾಡಿದ ಆನಂದ್...

ಟ್ರಾಕ್ಟರ್ ಖರೀದಿಸಿದ ರೌಂಡ್ಸ್ ಹಾಕಿದ ಎಂ.ಎಸ್. ಧೋನಿ.!.. ‘ಡೌನ್ ಟು ಅರ್ಥ್’ ಎಂದು ಕೊಂಡಾಡಿದ ಆನಂದ್ ಮಹೀಂದ್ರಾ

spot_img
- Advertisement -
- Advertisement -

ಕ್ಯಾಪ್ಟನ್ ಕೂಲ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ 2019ರ ವಿಶ್ವಕಪ್ ನಂತರ 1 ವರ್ಷದಿಂದ ಕ್ರಿಕೆಟ್‌ ಗೆ ಧೋನಿ ಎಂಟ್ರಿ ಕೊಟ್ಟಿಲ್ಲ. ಐಪಿಎಲ್ ನಲ್ಲಿ ಅವರ ಆಟ ನೋಡುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊರೊನಾ ಮಹಾಮಾರಿಯಿಂದಾಗಿ ವ್ಯರ್ಥವಾಗಿದೆ.

ಲಾಕ್ ಡೌನ್ ನಲ್ಲಿ ಧೋನಿ ತಮ್ಮ ಪತ್ನಿ ಹಾಗು ಮಗಳು ಝೀವಾ ಜೊತೆ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಮಹೀಂದ್ರಾ ಸಂಸ್ಥೆಯ 8 ಲಕ್ಷ ರೂ. ಬೆಲೆಬಾಳುವ ಸ್ವರಾಜ್ 963 FE ಟ್ರ್ಯಾಕ್ಟರ್ ಖರೀದಿಸಿದ್ದು, ಧೋನಿ ಟ್ರ್ಯಾಕ್ಟರ್ ಚಲಾಯಿಸುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟ್ಟರ್ ಖಾತೆಯಲ್ಲೂ ಪೋಸ್ಟ್ ಆಗಿದ್ದು, ಮಹೀಂದ್ರ ಸಂಸ್ಥೆ ಅಧ್ಯಕ್ಷ ಆನಂದ್ ಮಹೀಂದ್ರ ಸಹ ಟ್ವೀಟ್ ಮಾಡಿದ್ದಾರೆ. ಉತ್ತಮ ನಿರ್ಣಯ ಮಾಡುವಾತ ಎಂದು ಧೋನಿಯನ್ನು ಕೊಂಡಾಡಿದ್ದಾರೆ. ಒಟ್ಟಾರೆ ಮಾಜಿ ಕೂಲ್ ಕ್ಯಾಪ್ಟನ್ ಎಷ್ಟು ಡೌನ್ ಟು ಅರ್ಥ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿಕೊಂಡಿದ್ದಾರೆ

- Advertisement -
spot_img

Latest News

error: Content is protected !!