ಲಕ್ನೋ: ಭಾರೀ ಗಾತ್ರದ ಮೊಸಳೆಯೊಂದು ಗ್ರಾಮವೊಂದರಲ್ಲಿ ಹಾಡಹಗಲೇ ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡಿದ್ದು, ಇದರಿಂದ ಸ್ಥಳೀಯರು ಭಯಭೀತರಾದ ಘಟನೆ ಉತ್ತರಪ್ರದೇಶದ ಬಿಜ್ನೂರ್ ನ ನಂಗಲ್
ಸೋಟಿ ಗ್ರಾಮದಲ್ಲಿ ಆಗಸ್ಟ್ 8 ಗುರುವಾರದಂದು ನಡೆದಿದೆ.
https://x.com/Arhantt_pvt/status/1821362403306860734
ಬಿರುಸಿನ ಹೆಜ್ಜೆಯೊಂದಿಗೆ ಜನರ ಓಡಾಟದ ರಸ್ತೆಯಲ್ಲಿ ಸಾಗುತ್ತಿದ್ದ ಮೊಸಳೆಯನ್ನು ಕಂಡು ಸ್ಥಳೀಯರು ಆಘಾತಕ್ಕೊಳಗಾಗಿದ್ದರು. ಈ ಸಂದರ್ಭದಲ್ಲಿ ಮೊಸಳೆಯನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆ ವಿಡಿಯೋದಲ್ಲಿ ಮೊಸಳೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ, ಮತ್ತೊಂದೆಡೆ ಭಯಭೀತ ನಿವಾಸಿಗಳು ಓಡುತ್ತಿರುವ ದೃಶ್ಯವಿದೆ. ಒಬ್ಬಾತ ಮೊಸಳೆಯ ಹಿಂಬದಿ ಬಾಲಕ್ಕೆ ತುಳಿದು, ಅದನ್ನು ಪ್ರಚೋದಿಸುತ್ತಿದ್ದನ್ನು ಕಾಣಬಹುದಾಗಿದೆ. ಮತ್ತೊಂದೆಡೆ ನಾಯಿಯೊಂದು ಮೊಸಳೆಯನ್ನು ಚೇಸ್ ಮಾಡಿದ್ದು, ನಂತರ ಹೆದರಿ ಓಡಿಹೋಗಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ಗಂಟೆಗಳ ನಂತರ ಅರಣ್ಯಾಧಿಕಾರಿಗಳು ಮೊಸಳೆಯನ್ನು ಹಿಡಿದು ಕೊಂಡೊಯ್ದಿದ್ದು, ಇದರೊಂದಿಗೆ ಸ್ಥಳೀಯರು ನಿಟ್ಟುಸಿರು ಬಿಟ್ಟಿರುವುದಾಗಿ ವರದಿ ತಿಳಿಸಿದೆ.
ಇನ್ನು ಮೊಸಳೆ ಕಾಣಿಸಿಕೊಂಡ ಬಗ್ಗೆ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೊಸಳೆ ಎಲ್ಲೆಂದರಲ್ಲಿ ಓಡಾಟ ನಡೆಸಿತ್ತು ಎಂದು ವರದಿ ವಿವರಿಸಿದೆ.