- Advertisement -
![]()
- Advertisement -
ಹೈದರಾಬಾದ್: ನಟ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಡಿದ್ದಾರೆ.
ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಲ್ಲಿದ್ದು, ಆಗಸ್ಟ್ 8, ಗುರುವಾರದಂದು ಹೈದರಾಬಾದ್‌ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಎಂಗೇಜ್ ಮೆಂಟ್ ಬಳಿಕ ನಾಗಾರ್ಜುನ್ ಫೋಟೋಗಳನ್ನು ಹಂಚಿಕೊಂಡು ಇಬ್ಬರಿಗೂ ಶುಭಕೋರಿದ್ದಾರೆ.
ನಟ ನಾಗಾರ್ಜುನ್ ತಮ್ಮ ಎಕ್ಸ್ ನಲ್ಲಿ, “ನಮ್ಮ ಮಗ ನಾಗ ಚೈತನ್ಯ ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥ ಇಂದು ಬೆಳಿಗ್ಗೆ 9:42ಕ್ಕೆ ನೆರವೇರಿದೆ. ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಘೋಷಿಸಲು ತುಂಬಾ ಸಂತೋಷವಾಗುತ್ತಿದೆ. ಅವಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ನಾವು ತುಂಬಾ ಖುಷಿಯಾಗುತ್ತಿದೆ. ದಂಪತಿಗಳಿಗೆ ಅಭಿನಂದನೆಗಳು! ಅವರಿಗೆ ಜೀವನಪೂರ್ತಿ ಪ್ರೀತಿ ಮತ್ತು ಸಂತೋಷವನ್ನು ಹಾರೈಸುತ್ತೇನೆ. ದೇವರು ಒಳ್ಳೆಯದು ಮಾಡಲಿ!” ಎಂದು ‘ಬರೆದು ಫೋಟೋ ಹಂಚಿಕೊಂಡಿದ್ದಾರೆ.
- Advertisement -


