- Advertisement -
- Advertisement -
ಭೂಮಿಗೆ ಸಮೀಪದ ಕ್ಷುದ್ರಗ್ರಹವಾದ 2020 UA ಇಂದುಮುಂಜಾನೆಯ ವೇಳೆ ನಮ್ಮ ಗ್ರಹದ ಅತ್ಯಂತ ಸನಿಹದಲ್ಲೇ ಹಾದು ಹೋಗಿದೆ. ಗಗನಯಾತ್ರಿಗಳು ಈ ಕ್ಷುದ್ರಗ್ರಹದ ಪಥವನ್ನು ಸೂಕ್ಷ್ಮವಾಗಿ ಗಮನಿಸಿದ್ದು ಇದೊಂದು ಸ್ಮರಣೀಯ ಘಟನೆಯಾಗಿದೆ ಎಂದಿದ್ದಾರೆ.
ಈ ಕ್ಷುದ್ರಗ್ರಹವು ಭೂಮೇಲ್ಮೈನಿಂದ 46,000 ಕಿಮೀಗಳಷ್ಟು ದೂರದಲ್ಲಿ ಹಾದು ಹೋಗಿದೆ ಎಂದು ಅಂದಾಜಿಸಲಾಗಿದೆ. ಏಳು ಮೀಟರ್‌ಗಳಷ್ಟು ಎತ್ತರವಿರುವ ಈ ಕ್ಷುದ್ರಗ್ರಹವೇನಾದರೂ ಭೂಮಿಯ ವಾತಾವರಣ ಪ್ರವೇಶಿಸಿದ್ದರೆ ಅದು ಅಲ್ಲೇ ಉರಿದುಹೋಗುತ್ತಿತ್ತು. ಖಗೋಳಶಾಸ್ತ್ರೀಯ ಲೆಕ್ಕಾಚಾರದಲ್ಲಿ ಇದೊಂದು ಕೂದಲೆಳೆ ಅಂತರವಂತೆ!
- Advertisement -