Sunday, June 7, 2026
Homeತಾಜಾ ಸುದ್ದಿಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ- ಕೊಂದು, ಬೆಂಕಿ ಹಚ್ಚಿದ ಕಟುಕರು!..

ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ- ಕೊಂದು, ಬೆಂಕಿ ಹಚ್ಚಿದ ಕಟುಕರು!..

- Advertisement -
- Advertisement -

ಹೊಶಿಯಾರ್‌ಪುರ: ಇಲ್ಲಿನ ಜಲಾಲ್‌ಪುರ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಂದು ಬಳಿಕ ಬೆಂಕಿ ಹಚ್ಚಿದ ಅಮಾನುಷ ಘಟನೆ ನಡೆದಿದೆ. ಅರೆ ಬೆಂದ ಬಾಲಕಿಯ ದೇಹ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಸಂಬಂಧ ಗುರುಪ್ರೀತ್ ಸಿಂಗ್ ಹಾಗೂ ಆತನ ಅಜ್ಜ ಸುರ್ಜೀತ್ ಸಿಂಗ್‌ನನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ, ಅತ್ಯಾಚಾರ ಹಾಗೂ ಪೊಕ್ಸೋ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ.ಸಂತ್ರಸ್ತೆ ಅದೇ ಗ್ರಾಮದಲ್ಲಿ ವಾಸವಿದ್ದ ವಲಸೆ ಕಾರ್ಮಿಕರ ಬಾಲಕಿಯಾಗಿದ್ದು.ಗುರುಪ್ರೀತ್ ಬಾಲಕಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಂದೆ ಆಪಾದಿಸಿದ್ದಾರೆ.ಅರ್ಧ ಸುಟ್ಟ ಬಾಲಕಿಯ ದೇಹ ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

- Advertisement -

Latest News

error: Content is protected !!