Monday, May 20, 2024
Homeತಾಜಾ ಸುದ್ದಿರಾಜ್ಯದಲ್ಲಿ ಒಂದು ತಿಂಗಳ ಮೇಲ್ಪಟ್ಟ ಧ್ವನಿವರ್ಧಕ ಪರವಾನಗಿ ಶುಲ್ಕ 450 ರೂ. ನಿಗದಿ: ರಾಜ್ಯ ಸರ್ಕಾರದಿಂದ...

ರಾಜ್ಯದಲ್ಲಿ ಒಂದು ತಿಂಗಳ ಮೇಲ್ಪಟ್ಟ ಧ್ವನಿವರ್ಧಕ ಪರವಾನಗಿ ಶುಲ್ಕ 450 ರೂ. ನಿಗದಿ: ರಾಜ್ಯ ಸರ್ಕಾರದಿಂದ ಶುಲ್ಕ ಪರಿಷ್ಕರಿಸಿ ಆದೇಶ

spot_img
- Advertisement -
- Advertisement -

ಬೆಂಗಳೂರು: ಧ್ವನಿವರ್ಧಕ ಪರವಾನಿಗೆಗೆ ನಿಗದಿಪಡಿಸಿರುವ ಶುಲ್ಕವನ್ನು ಪರಿಷ್ಕರಣಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಒಂದು ತಿಂಗಳ ಅವಧಿಗಿಂತ ಮೇಲ್ಪಟ್ಟು ನೀಡಲಾಗುವ ಪರವಾನಗಿಗಳಿಗೆ ಒಟ್ಟಾರೆ ಶುಲ್ಕ 450 ರೂಪಾಯಿ ಮಾತ್ರ ನಿಗದಿಪಡಿಸಿ ಒಳಾಡಳಿತ ಇಲಾಖೆ ಆದೇಶಿಸಿದೆ.

2018 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಆದೇಶಗಳಲ್ಲಿ ಒಂದು ತಿಂಗಳ ಕಾಲಾವಧಿಯವರೆಗೆ ಮಾತ್ರ ವಸೂಲಿ ಮಾಡಬೇಕಾದ ಶುಲ್ಕದ ಕುರಿತು ಮಾತ್ರ ಆದೇಶ ಇತ್ತು. ಆದರೆ ಒಂದು ತಿಂಗಳಿಗಿಂತ ಮೇಲ್ಪಟ್ಟು ಕೊಡುವಂತಹ ಪರವಾನಗಿಗಳಿಗೆ ಶುಲ್ಕವನ್ನು ನಿಗದಿಪಡಿಸಿರಲಿಲ್ಲ.

ರಾಜ್ಯ ಸರ್ಕಾರ ಮೇ ತಿಂಗಳಲ್ಲಿ ರಾಜ್ಯಾದ್ಯಂತ ಧ್ವನಿವರ್ಧಕ ಬಳಕೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಅನುಷ್ಠಾನಗೊಳಿಸುವ ಕುರಿತು ನಿರ್ದೇಶನ ನೀಡಿತ್ತು.

ಅದರಂತೆ ಪರವಾನಗಿ ಶುಲ್ಕ ಒಂದು ದಿನದ ಅವಧಿಗೆ 75 ರೂಪಾಯಿ, ಒಂದರಿಂದ 31 ದಿನಗಳ ಅವಧಿಗೆ 15 ರೂಪಾಯಿ, ಒಂದು ತಿಂಗಳ ಅವಧಿಗೆ 450 ರೂಪಾಯಿ ನಿಗದಿಪಡಿಸಲಾಗಿತ್ತು‌.

ಇದೀಗ ಒಂದು ತಿಂಗಳ ಮೇಲ್ಪಟ್ಟ ಎಲ್ಲಾ ಪರವಾನಗಿಗಳಿಗೆ ಒಟ್ಟಾರೆ 450 ರೂಪಾಯಿ ನಿಗದಿಪಡಿಸಲಾಗಿದೆ.

- Advertisement -
spot_img

Latest News

error: Content is protected !!