Saturday, June 6, 2026
Homeಕರಾವಳಿಉಡುಪಿಉಡುಪಿ: ತಾಯಿ ಮಗು ನಿಗೂಢವಾಗಿ ನಾಪತ್ತೆ

ಉಡುಪಿ: ತಾಯಿ ಮಗು ನಿಗೂಢವಾಗಿ ನಾಪತ್ತೆ

- Advertisement -
- Advertisement -

ಕಾಪು: ತಾಯಿ ಮತ್ತು ಮಗು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಉಡುಪಿಯ ಮಲ್ಲಾರು ಗ್ರಾಮದ ಪಕೀರಣಕಟ್ಟೆ ಎಂಬಲ್ಲ ನಡೆದಿದೆ.

ಪಕೀರಣಕಟ್ಟೆ ಮಯ್ಯುದ್ದೀನ್‌ ಜುಮಾ ಮಸೀದಿ ಬಳಿಯ ನಿವಾಸಿ ಅಬುದಾಬಿಯಲ್ಲಿ ಉದ್ಯೋಗದಲ್ಲಿರುವ ರಿಜ್ವಾನ್‌ ಅಹಮದ್‌ ಅವರ ಪತ್ನಿ ರೈಸಾ ತಬಸ್ಸುಂ (26) ಮತ್ತು 2 ವರ್ಷ 10 ತಿಂಗಳು ಪ್ರಾಯದ ಮಗ ಇಜಾನ್‌ ಅಹ್ಮದ್‌ ನಾಪತ್ತೆಯಾಗಿದ್ದಾರೆ.

ಜೂ.1ರಂದು ಬೆಳಗ್ಗೆ  ತಬಸ್ಸುಂ ಅವರು ತಾನು ಮಲ್ಲಾರಿನಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಸ್ವಲ್ವ ದಿನ ಕಳೆದು ಬರುವುದಾಗಿ ಅತ್ತೆ ಬಳಿ ಹೇಳಿ ಮಗನೊಂದಿಗೆ ತೆರಳಿದ್ದರು. ಜೂ. 2ರಂದು ರೈಸಾ ತಬಸ್ಸುಂ ಅವರ ತಾಯಿ ದೂರವಾಣಿ ಕರೆ ಮಾಡಿ ಮಗಳ ಬಗ್ಗೆ ವಿಚಾರಿಸಿದ್ದು, ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ, ಅವಳಿಗೆ ಸ್ವಲ್ಪ ಮೊಬೈಲ್‌ ಕೊಡಿ ಎಂದು ತಿಳಿಸಿದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ರೈಸಾ ತಬಸ್ಸುಂ ಅವರ ಅತ್ತೆ ಮುಮ್ತಾಜ್‌ ತನ್ನ ಸೊಸೆ ಮೊಮ್ಮಗನೊಂದಿಗೆ ತಾಯಿ ಮನೆಗೂ ಹೋಗದೆ, ಮರಳಿ ಅತ್ತೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾಪು ಪೊಲೀಸ್‌ ಠಾಣೆಯಲ್ಲಿ ದೂರು‌ ನೀಡಿದ್ದಾರೆ‌‌.

- Advertisement -

Latest News

error: Content is protected !!