Sunday, June 7, 2026
Homeಕರಾವಳಿಮಂಗಳೂರಿನಲ್ಲಿ ಚೀನಾ ಮೂಲದ ನಾವಿಕ ನಾಪತ್ತೆ

ಮಂಗಳೂರಿನಲ್ಲಿ ಚೀನಾ ಮೂಲದ ನಾವಿಕ ನಾಪತ್ತೆ

- Advertisement -
- Advertisement -

ಮಂಗಳೂರು: ಅರಬ್ಬೀ ಸಮುದ್ರದ ಕಡೆಗೆ ತೆರಳುತ್ತಿದ್ದ ಪನಾಮ ದೇಶದ ಹಡಗಿನಲ್ಲಿದ್ದ ಚೀನಾ ಮೂಲದ ನಾವಿಕ ಸುರತ್ಕಲ್‌ನಿಂದ ಸುಮಾರು 70 ನಾಟಿಕಲ್ ಮೈಲು ದೂರದಲ್ಲಿ ಮೇ10ರಂದು ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ನಾವಿಕನು ಚೀನಾದ ಕ್ಷು ಜುನ್ ಫೇಂಗ್ (52)ಎಂದು ಗುರುತಿಸಲಾಗಿದೆ. ಚೀನಾದ ಝುನ್ ಪೇ ಬಂದರಿನಿಂದ ಸಿಂಗಾಪುರ ಮಾರ್ಗವಾಗಿ ಶ್ರೀಲಂಕಾಕ್ಕೆ ತೆರಳಿದ್ದ ಹಡಗು ಅಲ್ಲಿಂದ ಗುಜರಾತ್‌ನ ಮುಂಡ್ರಾ ಬಂದರಿಗೆ ಸಂಚರಿಸುತ್ತಿತ್ತು. ಈ ಹಡಗು ಮೇ10ರಂದು ರಾತ್ರಿ 1.10ರ ಸುಮಾರಿಗೆ ಅರಬ್ಬೀ ಸಮುದ್ರದ ಕಡೆಗೆ ತೆರಳುತ್ತಿದ್ದ ವೇಳೆ ಆತ ನಾಪತ್ತೆಯಾಗಿದ್ದಾನೆ. ಈ ಕುರಿತು ಹಡಗಿನಲ್ಲಿದ್ದ ಇತರರು ಮೇ 28ರಂದು ಗುಜರಾತ್ ಪೊಲೀಸರಿಗೆ ದೂರು ನೀಡಿದ್ದು, ಅಲ್ಲಿಂದ ಪೊಲೀಸರು ಮಂಗಳೂರು ಕೋಸ್ಟ್ ಗಾರ್ಡ್‌ಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಜೂ. 1ರಂದು ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.ನಾಪತ್ತೆಯಾಗಿರುವ ಚೀನೀ ಪ್ರಜೆಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಮಂಗಳೂರು ಕರಾವಳಿ ಪೊಲೀಸ್ ಠಾಣೆ 9480800574 ಅಥವಾ ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಂ 0820-2538100 ಸಂಪರ್ಕಿಸಬಹುದು ಎಂದು ಕರಾವಳಿ ಕಾವಲು ಪೊಲೀಸರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!