Wednesday, November 13, 2024
Homeಕರಾವಳಿಅಜ್ಜಿಬೆಟ್ಟು ವಾರ್ಡ್ ನ ಬಿಜೆಪಿ ಕಾರ್ಯಕರ್ತರಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

ಅಜ್ಜಿಬೆಟ್ಟು ವಾರ್ಡ್ ನ ಬಿಜೆಪಿ ಕಾರ್ಯಕರ್ತರಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ

spot_img
- Advertisement -
- Advertisement -

ಬಂಟ್ವಾಳ : ರಾಷ್ಟ್ರ ನಿರ್ಮಾಣದ ಕರ್ಮಯೋಗಿ, ಸರ್ವ ಬಾರತೀಯರಿಗೊಂದು ರಾಷ್ಟ್ರ ಧರ್ಮ ವನ್ನು ನಿರ್ಮಿಸಿಕೊಟ್ಟ ಸಂವಿಧಾನ ಶಿಲ್ಪಿ, ಭವ್ಯ ಭಾರತದ ಕನಸುಗಾರ, ಸಮಾನತೆಯ ಹರಿಕಾರ, ಭಾರತರತ್ನ ಡಾ. ಬಾಬಸಾಹೇಬ್ ಭೀಮ್ ರಾವ್ ರಾಮ್ ಜಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಇಂದು ಬಂಟ್ವಾಳ ನಗರಸಭೆಯ ಅಜ್ಜಿಬೆಟ್ಟು ವಾರ್ಡ್ ನ ಬಿಜೆಪಿ ಕಾರ್ಯಕರ್ತರಿಂದ ಬಿ.ಸಿ ರೋಡು ಅಜ್ಜಬೆಟ್ಟುವಿನ ಬಸವ ಮಂಟಪದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷರಾದ ದೇವಪ್ಪ ಪೂಜಾರಿ ಬಾಳಿಕೆ ಮತ್ತು ದ.ಕ ಬಿಜೆಪಿ ಯುವಮೋರ್ಚಾ ಇದರ ಕಾರ್ಯದರ್ಶಿ ಸುದರ್ಶನ ಬಜ ,ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು, ಪ್ರಣಮ್ ರಾಜ್ ಅಜ್ಜಿಬೆಟ್ಟು ,ಹಿರಿಯರಾದ ದಾನಿ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು ,ಶ್ರೀನಿವಾಸ್ ಅಜ್ಜಿಬೆಟ್ಟು ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!