Saturday, June 6, 2026
HomeUncategorizedಮಂಗಳೂರು : ನಿಷೇಧದ ನಡುವೆ‌ ಬುಲೆಟ್ ಬೈಕ್ ನಲ್ಲಿ ಮದ್ಯ ಸಾಗಾಟ: ಅಬಕಾರಿ ದಳದಿಂದ‌ ಬುಲೆಟ್...

ಮಂಗಳೂರು : ನಿಷೇಧದ ನಡುವೆ‌ ಬುಲೆಟ್ ಬೈಕ್ ನಲ್ಲಿ ಮದ್ಯ ಸಾಗಾಟ: ಅಬಕಾರಿ ದಳದಿಂದ‌ ಬುಲೆಟ್ ಬೈಕ್ ಹಾಗೂ ಮದ್ಯ ವಶ

- Advertisement -
- Advertisement -

ಮಂಗಳೂರು : ಬುಲೆಟ್ ಬೈಕ್ ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ  4.665 ಲೀ. ಮದ್ಯ ಹಾಗೂ 8.150 ಲೀ. ಬಿಯರ್ ನ್ನು ವಶಪಡಿಸಿಕೊಂಡ ಘಟನೆ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ ಬಳಿಯ ದಾಮಸ್ ಕಟ್ಟೆ ಸಮೀಪ ನಡೆದಿದೆ.

ನಿನ್ನೆ ಸಂಜೆ 6.00 ಗಂಟೆ ವೇಳೆ ಮಂಗಳೂರು ಉಪವಿಭಾಗ 2 ರ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ರಸ್ತೆಗಾವಲು ನಡೆಸುತ್ತಿದ್ದ ಸಂದರ್ಭದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.665 ಲೀ. ಮದ್ಯ ಹಾಗೂ 8.150 ಲೀ. ಬಿಯರ್ ನ್ನು ಪತ್ತೆ ಹಚ್ಚಿ, ಸಾಗಾಟ ಮಾಡುತ್ತಿದ್ದ ಬುಲೆಟ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ.

ಈ  ವೇಳೆ ಆರೋಪಿಗಳು ಪರಾರಿಯಾಗಿದ್ದು, ಮಂಗಳೂರು ಉಪವಿಭಾಗ 2 ರ ಅಬಕಾರಿ ಉಪ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾದ ಅಮರ್ ನಾಥ್ ಭಂಡಾರಿ, ಅಬಕಾರಿ ನಿರೀಕ್ಷಕರಾದ ವಿಜಯ್ ಕುಮಾರ್, ಅಬಕಾರಿ ಉಪ ನಿರೀಕ್ಷಕರಾದ ಸುರೇಂದ್ರ ಹಾಗೂ ಅಬಕಾರಿ ವಾಹನ ಚಾಲಕರಾದ ಕೆ.ಮಾಯಿಲಪ್ಪ ಪಾಲ್ಗೊಂಡಿದ್ದರು..

- Advertisement -

Latest News

error: Content is protected !!