Friday, June 5, 2026
Homeತಾಜಾ ಸುದ್ದಿಕಲ್ಲಡ್ಕ: ಅಖಂಡ ಭಾರತ ಸಂಕಲ್ಪ ದಿನಾಚರಣೆ: ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್

ಕಲ್ಲಡ್ಕ: ಅಖಂಡ ಭಾರತ ಸಂಕಲ್ಪ ದಿನಾಚರಣೆ: ಪಂಜಿನ ಮೆರವಣಿಗೆಯನ್ನು ಉದ್ಘಾಟಿಸಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಕಲ್ಲಡ್ಕ: ವಿಶ್ವ ಹಿಂದು ಪರಿಷತ್ ಬಜರಂಗದಳ ಕಲ್ಲಡ್ಕ ಪ್ರಖಂಡ, ಮಾತೃ ಶಕ್ತಿ ದುರ್ಗಾವಾಹಿನಿ ಕಲ್ಲಡ್ಕ ಪ್ರಖಂಡ ಇದರ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ – ಪಂಜಿನ ಮೆರವಣಿಗೆ ಕಲ್ಲಡ್ಕದಲ್ಲಿ ನಡೆಯಿತು.

ಶಾಸಕ ಉಳಿಪ್ಪಾಡಿ ಗುತ್ತು ರಾಜೇಶ್ ನಾಯ್ಕ್ ಪಂಜಿನ ಮೆರವಣಿಗೆಯನ್ನು ಉದ್ಘಾಟನೆ ಮಾಡಿ ಶುಭ ಹಾರೈಸಿದರು.‌ ಕಲ್ಲಡ್ಕ ಪ್ರಭಾಕರ್ ಭಟ್ ವಿಶೇಷ ಉಪನ್ಯಾಸ ನೀಡಿದರು. ಕೆ.ಎನ್.ಆರ್, ಪ್ರಾಜೆಕ್ಟ್ ಮ್ಯಾನೇಜರ್ ಮಹೇಂದ್ರ ಕುಮಾರ್ ಸಿಂಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಡಾಕ್ಟರ್ ಪ್ರಸನ್ನ, ಯೋಧ ಭಾಸ್ಕರ್ ಅಮ್ಮೂರು, ರುಕ್ಕಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ವಸಂತಮಾದವ, ರಾಧಾಕೃಷ್ಣ ಅಡ್ಯಂತಾಯ, ಕ ಕೃಷ್ಣಪ್ಪ ಕಲ್ಲಡ್ಕ, ಸುಜಿತ್ ಕೊಟ್ಟಾರಿ, ಸಚಿನ್ ಮೆಲ್ಕಾರ್, ರತ್ನಕರ ಶೆಟ್ಟಿ, ದಿನೇಶ್ ಅಮ್ಮೂರು, ಮಿಥುನ್ ಕಲ್ಲಡ್ಕ ಮಾತೃ ಶಕ್ತಿ ದುರ್ಗಾ ವಾಹಿನಿ ಸಂಘ ದ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ 1500 ಕ್ಕಿಂತ ಹೆಚ್ಚು ಕಾರ್ಯಕರ್ತರು ಹಾಗೂ ಪ್ರಮುಖರು ಭಾಗವಹಿಸಿದರು.

- Advertisement -

Latest News

error: Content is protected !!