- Advertisement -
- Advertisement -
ಕಾರ್ಕಳ: ಅಜೆಕಾರು ನಿವಾಸಿ ಬಾಲಕೃಷ್ಣ ಪೂಜಾರಿಯನ್ನು ಆತನ ಪತ್ನಿ ಪ್ರತಿಮಾ ಹಾಗೂ ಆಕೆಯ ಪ್ರಿಯಕರ ಕಾರ್ಕಳದ ದಿಲೀಪ್ ಹೆಗ್ಡೆ ಸೇರಿಕೊಂಡು ಹತ್ಯೆಗೈದಿದ್ದು, ಇದೀಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ವರದಿ ಕೈ ಸೇರಿದೆ..
ಪೊಲೀಸರಿಗೆ ಲಭಿಸಿದ ವರದಿಯಲ್ಲಿ ಬಾಲಕೃಷ್ಣ ಪೂಜಾರಿ ಅವರನ್ನ ಉಸಿರುಗಟ್ಟಿ ಸಾವನ್ನಪ್ಪಿರುವ ಬಗ್ಗೆ ಉಲ್ಲೇಖಿಸಲಾಗಿದ್ದು, ಮುಖದಲ್ಲಿ ಗಾಯದ ಗುರುತು ಮೂಡಿರುವ ಬಗ್ಗೆ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಪೊಲೀಸ್ ತನಿಖೆ ಮತ್ತಷ್ಟು ಚುರುಕುಕೊಂಡಿದೆ. ಮೊಬೈಲ್ ಸಂಭಾಷಣೆ, ಕರೆ ಮಾಡಿದ ವಿವರ, ನೆಟ್‌ವರ್ಕ್ ಮಾಹಿತಿ, ಸಿಸಿಟಿವಿ ಬಗ್ಗೆ ಪೊಲೀಸರಿಂದ ತಾಂತ್ರಿಕ ತನಿಖೆ ವೇಗ ಪಡೆದುಕೊಂಡಿದೆ.
- Advertisement -