Wednesday, June 3, 2026
Homeಉದ್ಯಮಮಂಗಳೂರಿನಿಂದ ದಿಲ್ಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌; ಫೆ.01 ರಿಂದ ಆರಂಭಗೊಂಡ ನೇರ ವಿಮಾನಯಾನ

ಮಂಗಳೂರಿನಿಂದ ದಿಲ್ಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌; ಫೆ.01 ರಿಂದ ಆರಂಭಗೊಂಡ ನೇರ ವಿಮಾನಯಾನ

- Advertisement -
- Advertisement -

ಮಂಗಳೂರು: ಫೆ.01 ಶನಿವಾರದಿಂದ ಮಂಗಳೂರಿನಿಂದ ದಿಲ್ಲಿಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯ ನೇರ ವಿಮಾನಯಾನ ಆರಂಭಗೊಂಡಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉದ್ಘಾಟನ ವಿಮಾನ ಐಎಕ್ಸ್‌ 1552 ಬೆಳಗ್ಗೆ 6.40ಕ್ಕೆ ಹೊರಟು 9.35ಕ್ಕೆ ದಿಲ್ಲಿ ಏರ್‌ಪೋರ್ಟಲ್ಲಿ ಇಳಿಯಿತು. ಹಾಗೆಯೇ ಜೊತೆ ವಿಮಾನವಾದ ಐಎಕ್ಸ್‌ 2768 ದಿಲ್ಲಿಯಿಂದ ಬೆಳಗ್ಗೆ 6.40ಕ್ಕೆ ಹೊರಟು ಮಂಗಳೂರಿನಲ್ಲಿ 9.35ಕ್ಕೆ ಇಳಿದಿದೆ. ಮಂಗಳೂರು – ದಿಲ್ಲಿ ವಿಮಾನದಲ್ಲಿ 167 ಮಂದಿ ಹಾಗೂ ದಿಲ್ಲಿ-ಮಂಗಳೂರು ವಿಮಾನದಲ್ಲಿ 144 ಪ್ರಯಾಣಿಕರಿದ್ದರು. ವಿಮಾನ ಪ್ರತಿದಿನ ಸಂಚರಿಸಲಿದೆ.

ದಿಲ್ಲಿಯಿಂದ ಹೊರಟ ವಿಮಾನಕ್ಕೆ ಕ್ಯಾ| ವಿನೀತ್‌ ಕುಮಾರ್‌ ಕಮಾಂಡರ್‌ ಆಗಿದ್ದರು. ಮಂಗಳೂರು ವಿಮಾನ ನಿಲ್ದಾಣದ ಅಗ್ನಿಶಾಮಕ ವಿಭಾಗದಿಂದ ಹೊಸ ವಿಮಾನಕ್ಕೆ ಜಲಫಿರಂಗಿ ವಂದನೆ ಸಲ್ಲಿಸಿ ಗೌರವ ಸೂಚಿಸಲಾಯಿತು.

- Advertisement -

Latest News

error: Content is protected !!