Friday, July 17, 2026
Homeಕರಾವಳಿಉಡುಪಿಉಡುಪಿ: ಯಶಪಾಲ್ ಸುವರ್ಣಗೆ ಮತ್ತೆ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಬೆದರಿಕೆ

ಉಡುಪಿ: ಯಶಪಾಲ್ ಸುವರ್ಣಗೆ ಮತ್ತೆ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಬೆದರಿಕೆ

- Advertisement -
- Advertisement -

ಉಡುಪಿ: ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಗೆ ಮತ್ತೆ ಬೆದರಿಕೆ ಹಾಕಲಾಗಿದೆ. ಮಾರಿಗುಡಿ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಮತ್ತೆ ಬೆದರಿಕೆ ಹಾಕಲಾಗಿದ್ದು,  ಶ್ರದ್ಧಾಂಜಲಿ ಬ್ಯಾನರ್ ಬೇಗ ತಯಾರು ಮಾಡಿಡು, ಮತ್ತೆ ಹುಟ್ಟಿ ಬರಬೇಡ ಎಂದು ಬೆದರಿಕೆ ಹಾಕಲಾಗಿದೆ‌.

ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆ ಪಡೆಯುವಂತೆ ಯಶಪಾಲ್ ಸುವರ್ಣ ಅವರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಬೆದರಿಕೆ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಯಶ್ ಪಾಲ್ ಬೆಂಬಲಿಗರಿಂದ ಉಡುಪಿ ಎಸ್ಪಿ ಗೆ ಮನವಿ ಸಲ್ಲಿಸಲಾಗಿದೆ.

ಕಾಪು ಪೊಲೀಸ್ ಠಾಣೆಯಲ್ಲಿ ಯುವ ಮೋರ್ಛಾ ದಿಂದ ಈಗಾಗಲೇ ದೂರು ದಾಖಲಾಗಿದ್ದು ತಾನಾಗಿಯೇ ಇನ್ನೂ ದೂರು ಯಶಪಾಲ್ ಸುವರ್ಣ ದೂರು  ದಾಖಲಿಸಿಲ್ಲ. ಆದರೆ ಭದ್ರತೆ ನೀಡುವ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ.

- Advertisement -

Latest News

error: Content is protected !!