Thursday, June 4, 2026
Homeತಾಜಾ ಸುದ್ದಿಮುರುಘಾ ಶ್ರೀಗಳಿಗೆ ಸದ್ಯಕ್ಕಿಲ್ಲ ಬೇಲ್; ಸೆ.27 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಮುರುಘಾ ಶ್ರೀಗಳಿಗೆ ಸದ್ಯಕ್ಕಿಲ್ಲ ಬೇಲ್; ಸೆ.27 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

- Advertisement -
- Advertisement -

ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳಿಗೆ ಬೇಲ್‌ ಸದ್ಯಕ್ಕಿಲ್ಲ. ಇದೀಗ ಮತ್ತೆ ಶ್ರೀಗಳನ್ನ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲು ಕೋರ್ಟ್‌ ಆದೇಶಿಸಿದೆ. ಸೆ.27 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ.

ಚಿತ್ರದುರ್ಗ 2 ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಮುರುಘಾ ಶರಣರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 27 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಮುರುಘಾ ಶರಣ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಕೊನೆಯ ದಿನವಾಗಿದ್ದು, ಇಂದು ಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ಇತ್ತು. ಕೋರ್ಟ್ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದು, ಶ್ರೀಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

- Advertisement -

Latest News

error: Content is protected !!