Wednesday, June 26, 2024
Homeತಾಜಾ ಸುದ್ದಿ10 ವರ್ಷಗಳ ನಂತರ ‘ಬಹದ್ದೂರ್‌’ ಸಿನಿಮಾ ರೀ ರಿಲೀಸ್‌ 

10 ವರ್ಷಗಳ ನಂತರ ‘ಬಹದ್ದೂರ್‌’ ಸಿನಿಮಾ ರೀ ರಿಲೀಸ್‌ 

spot_img
- Advertisement -
- Advertisement -

ನಟ ಧ್ರುವ ಸರ್ಜಾ ಅವರ `ಬಹದ್ದೂರ್‌’ ಸಿನಿಮಾವ ಇದೀಗ ಮರು ಬಿಡುಗಡೆಯಾಗುತ್ತಿದ್ದು, ಹತ್ತು ವರ್ಷಗಳ ನಂತರ ಜೂನ್‌ 21 ರಂದು ಈ ಚಿತ್ರವನ್ನು ಚಿತ್ರ ಮಂದಿರಗಳಲ್ಲಿ ಕಾಣಬಹುದಾಗಿದೆ.

ಆರ್‌ ಎಸ್‌ ಪ್ರೊಡಕ್ಷನ್ ಲಾಂಛನದಲ್ಲಿ ಆರ್‌ ಶ್ರೀನಿವಾಸ್‌ ಹಾಗೂ ಕೆ.ಪಿ.ಶ್ರೀಕಾಂತ್‌ ನಿರ್ಮಿಸಿರುವ, ಚೇತನ್‌ ಕುಮಾರ್‌ ನಿರ್ದೇಶನದ ಹಾಗೂ ಆಕ್ಷನ್‌ ಪ್ರಿನ್ಸ್ ಧ್ರುವ ಸರ್ಜಾ ನಾಯಕ ಹಾಗೂ ರಾಧಿಕಾ ಪಂಡಿತ್‌ ನಾಯಕಿಯಾಗಿ ನಟಿಸಿದ್ದ ಸೂಪರ್‌ ಹಿಟ್‌ “ಬಹದ್ದೂರ್‌” ಚಿತ್ರ 2014ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿತ್ತು. 

ಗೋಕುಲ್‌ ಫಿಲಂಸ್‌ ಅವರು ಚಿತ್ರವನ್ನು ರೀ ರಿಲೀಸ್‌ ಮಾಡುತ್ತಿದ್ದಾರೆ. “ಬಹದ್ದೂರ್‌” ಚಿತ್ರಕ್ಕೆ ಪುನೀತ್‌ ರಾಜಕುಮಾರ್‌ ಅವರು ಧ್ವನಿ ನೀಡಿದ್ದರು. ಪುನೀತ್‌ ಅವರು ತಮ್ಮ ಅಭಿನಯದ ಚಿತ್ರವನ್ನು ಹೊರತುಪಡಿಸಿ ಧ್ವನಿ ನೀಡಿದ ಮೊದಲ ಚಿತ್ರ “ಬಹದ್ದೂರ್‌”. ಚಿತ್ರದ ಮೊದಲ ಸನ್ನಿವೇಶಕ್ಕೆ ರವಿಚಂದ್ರನ್‌ ಅವರು ಕ್ಲಾಪ್‌ ಮಾಡಿ ಹಾರೈಸಿದ್ದರು. ಪುನೀತ್‌ ರಾಜಕುಮಾರ್‌ ಅವರೆ ಕ್ಯಾಮೆರಾ ಚಾಲನೆ ಮಾಡಿ ಶುಭ ಕೋರಿದ್ದರು. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಹಿಟ್‌ ಲಿಸ್ಟ್ ಸೇರಿದ್ದವು.

- Advertisement -
spot_img

Latest News

error: Content is protected !!