Saturday, May 18, 2024
Homeಕರಾವಳಿಬೆಳ್ತಂಗಡಿ: ಬಡ ಕುಟುಂಬದ ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಯುವನಾಯಕ ಆದಿತ್ಯ ನಾರಾಯಣ ಕೊಲ್ಲಾಜೆ

ಬೆಳ್ತಂಗಡಿ: ಬಡ ಕುಟುಂಬದ ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಯುವನಾಯಕ ಆದಿತ್ಯ ನಾರಾಯಣ ಕೊಲ್ಲಾಜೆ

spot_img
- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಕಣಿಯೂರು ಗ್ರಾಮದ ಅಂತಾರದ ಬಡ ಕುಟುಂಬವೊಂದು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿ ಅನುಭವಿಸುತ್ತಿರುವ ಮೂಕ ವೇದನೆಗೆ ಸರ್ವೋದಯ ಕರ್ನಾಟಕ ಪಕ್ಷದ ಯುವ ನಾಯಕ ಆದಿತ್ಯ ನಾರಾಯಣ ಕೊಲ್ಲಾಜೆ ನೇತೃತ್ವದ ರೈತ ಸಂಘದ ತಂಡ ಸ್ಪಂದಿಸಿ, ವಿದ್ಯುತ್ ಸಂಪರ್ಕಕ್ಕೆ ಲಂಚ ಕೇಳುತ್ತಿರುವ ಗುತ್ತಿಗೆದರನಿಗೆ ಗೆ ಕೊನೆಯ ಎಚ್ಚರಿಕೆಯನ್ನು ನೀಡಿದ್ದಾರೆ .

ಏನಿದು ಪ್ರಕರಣ ?
ಎಪ್ರಿಲ್ 8,2023 ರಂದು ಬಡ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಸರ್ವೋದಯ ಕರ್ನಾಟಕ ಪಕ್ಷ ಯುವ ನಾಯಕ ಆದಿತ್ಯ ನಾರಾಯಣ ಕೊಲ್ಲಾಜೆ ನೇತೃತ್ವದ ರೈತ ಸಂಘದ ತಂಡವು ಕಣಿಯೂರು ಗ್ರಾಮ, ಅಂತರಕ್ಕೆ ಭೇಟಿ ನೀಡಿತ್ತು. ಈ ಬಡ ಕುಟುಂಬಕ್ಕೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಪಂಚಾಯತ್ ಈಗಾಗಲೇ ನಿರ್ಣಯ ಕೈಗೊಂಡಿದೆ ಎಂದು ಮಾಹಿತಿ ಕಲೆ ಹಾಕಿದಾಗ ರೈತ ಸಂಘಕ್ಕೆ ತಿಳಿಯಿತು.

ಆದರೆ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಈ ಬಡ ಕುಟುಂಬ ಬಲಿಯಾಗಿದ್ದು, ಲಂಚ ಕೊಡಲು ಸಾಧ್ಯವಾಗದೆ ವಿದ್ಯುತ್ ಸಂಪರ್ಕ ಸಿಗುತ್ತಿಲ್ಲ. ಡಿಸಿ ಆದೇಶದ ಹೊರತಾಗಿಯೂ, ಯಾವುದೇ ಹಣ ಪಾವತಿಸುವ ಅಗತ್ಯವಿಲ್ಲ ಎಂದು ಜೆಇ ಹೇಳಿದ್ದರೂ, ಕೇವಲ 500 ರೂ.ಗಳಲ್ಲಿ ಮೀಟರ್ ನೀಡಬಹುದು. ಉಚಿತ ವಿದ್ಯುತ್ ನೀಡಲು ಗ್ರಾಮ ಪಂಚಾಯಿತಿ ಆದೇಶದ ಹೊರತಾಗಿಯೂ, ಗುತ್ತಿಗೇದಾರ ವಿದ್ಯುತ್ ಮೀಟರ್‌ಗಾಗಿ ಬಡವರಿಂದ Rs.20000 ಲಂಚ ಕೇಳುತ್ತಿದ್ದಾರೆ ಎಂದು ರೈತ ಸಂಘ ಮತ್ತು ಯುವ ನಾಯಕ ಆದಿತ್ಯ ನಾರಾಯಣ ಕೊಲ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

ಭ್ರಷ್ಟಾಚಾರದ ಬೇಡಿಕೆಯ ಆಡಿಯೋ ರೆಕಾರ್ಡಿಂಗ್ ಪುರಾವೆ ನಮ್ಮ ಬಳಿ ಇದೆ ಮತ್ತು ಈ ಬಡ ಕುಟುಂಬಕ್ಕೆ ಉಚಿತವಾಗಿ ಮೀಟರ್ ಅಳವಡಿಸಲು ಗುತ್ತಿಗೆದರನಿಗೆ ಗೆ ಕೊನೆಯ ಎಚ್ಚರಿಕೆ ರೈತ ಸಂಘ ನೀಡಿದ್ದಾರೆ. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ರವಿಕಿರಣ್ ಪುಣಚ, ಸುರೇಂದ್ರ ಕೋರ್ಯ, ಅವಿನಾಶ್, ಉಮೇಶ ಪೂಜಾರಿ, ದೇವಪ್ಪ, ರಾಮಣ್ಣ ವಿಟ್ಲ, ಚಿದಾನಂದ್ ಇ ತಂಡದಲ್ಲಿದ್ದರು.

- Advertisement -
spot_img

Latest News

error: Content is protected !!