Wednesday, June 3, 2026
Homeಕರಾವಳಿಪುತ್ತೂರು; ಕಾರು ಮತ್ತು ಬೈಕ್ ನಡುವೆ ಅಪಘಾತ; ಕಳೆದ ವಾರ ವಿವಾಹವಾಗಿದ್ದ ನವ ದಂಪತಿಗೆ ಗಂಭೀರ...

ಪುತ್ತೂರು; ಕಾರು ಮತ್ತು ಬೈಕ್ ನಡುವೆ ಅಪಘಾತ; ಕಳೆದ ವಾರ ವಿವಾಹವಾಗಿದ್ದ ನವ ದಂಪತಿಗೆ ಗಂಭೀರ ಗಾಯ

- Advertisement -
- Advertisement -

ಪುತ್ತೂರು; ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಕಳೆದ ವಾರ ವಿವಾಹವಾಗಿದ್ದ ನವ ದಂಪತಿ ಗಂಭೀರ ಗಾಯಗೊಂಡ ಘಟನೆ ಪುತ್ತೂರಿನ ಕೌಡಿಚಾರ್ ನಲ್ಲಿ ನಡೆದಿದೆ.

 ಸುಳ್ಯ ತಾಲೂಕಿನ ಜಾಲ್ಲೂರಿನ ಅಡ್ಕಾರಿನ ಕೋನಡ್ಕಪದವಿನ ಸಂದೇಶ್ ಹಾಗೂ ಅವರ ಪತ್ನಿ ರಕ್ಷಿತಾ ಗಾಯಗೊಂಡವರು. ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದಕ್ಕೆ ಇವರ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ದಂಪತಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಪರಿಣಾಮ ಕಾಲಿಗೆ ಗಂಭೀರ ಗಾಯಗಳಾಗಿವೆ. ಇವರಿಬ್ಬರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!