Wednesday, June 3, 2026
Homeಕರಾವಳಿಕಾಸರಗೋಡು ಕಾಸರಗೋಡು; ಗಂಡನನ್ನು ಕಡಿದು ಕೊಲೆಗೈದ ಹೆಂಡತಿ

 ಕಾಸರಗೋಡು; ಗಂಡನನ್ನು ಕಡಿದು ಕೊಲೆಗೈದ ಹೆಂಡತಿ

- Advertisement -
- Advertisement -

ಕಾಸರಗೋಡು; ಗಂಡನನ್ನು ಕಡಿದು ಹೆಂಡತಿ ಕೊಲೆ ಮಾಡಿರುವ ಘಟನೆ ಕಾಸರಗೋಡಿನ ಪಾಣತ್ತೂರಿ ನಲ್ಲಿ ಶುಕ್ರವಾರ ಸಂಜೆ ನಡೆದಿದೆ.ಪುತ್ತೂರಡ್ಕದ ಬಾಬು(54) ಕೊಲೆಯಾದ ವ್ಯಕ್ತಿ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪತ್ನಿ ಸೀಮಂತಿನಿನನ್ನು ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದಾರೆ.

ಕೌಟುಂಬಿಕ ಕಲಹ ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ದಿನಂಪ್ರತಿ ಪಾನಮತ್ತ ರಾಗಿ ಮನೆಗೆ ಬರುತ್ತಿದ್ದ ಬಾಬು ಶುಕ್ರವಾರ ಸಂಜೆಯೂ ಮನೆಗೆ ಬಂದಾಗ ಇಬ್ಬರ ಜಗಳ ವಾಗಿದ್ದು, ಈ ಸಂದರ್ಭದಲ್ಲಿ ಕತ್ತಿ ಯಿಂದ ಬಾಬು ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಇದೇ ಕತ್ತಿಯಿಂದ ಬಾಬುವನ್ನು ಕಡಿದು ಕೊಲೆಗೈದಿದ್ದಾಳೆ.


ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಬಾಬು ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಪತ್ತೆಯಾಗಿದ್ದಾರೆ. ಕೂಡಲೇ ರಾಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳ ಕ್ಕಾಗಾಮಿಸಿದ ಪೊಲೀಸರು ಪತ್ನಿ ಸೀಮಂತಿನಿ ಯನ್ನು ವಶಕ್ಕೆ ತೆಗೆದು ಪಡೆದಿದ್ದಾರೆ. ಗಾಯಗೊಂಡಿರುವ ಸೀಮಂತಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಮೃತ ದೇಹದ ಮಹಜರು ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!