Saturday, June 6, 2026
Homeತಾಜಾ ಸುದ್ದಿನಟಿ ಶುಭಾ ಪೂಂಜಾ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತಾ?

ನಟಿ ಶುಭಾ ಪೂಂಜಾ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತಾ?

- Advertisement -
- Advertisement -

ಲಾಕ್‍ಡೌನ್ ನಡುವೆಯೂ ಒಂದು ಕಡೆ ದುರಂತಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಸೆಲೆಬ್ರೆಟಿಗಳು ದಾಂಪತ್ಯಕ್ಕೆ ಕಾಲಿರಿಸುತ್ತಿದ್ದಾರೆ. ಈ ಸಾಲಿಗೆ ನಟಿ ಶುಭಾ ಪೂಂಜಾ ಕೂಡ ಸೇರಿದ್ದು, ಶೀಘ್ರದಲ್ಲೇ ದಾಂಪತ್ಯಕ್ಕೆ ಕಾಲಿರಿಸಲಿದ್ದಾರೆ.

ನಟಿ ಶುಭಾ ಪೂಂಜಾ ಸುಮಂತ್ ಎಂಬ ಹುಡುಗನ ಕೈ ಹಿಡಿಯುತ್ತಿದ್ದಾರೆ. ಹುಡುಗ ಸುಮಂತ್ ಮಹಾಬಲ ಮಂಗಳೂರು ಮೂಲದವರಾಗಿದ್ದು, ಜಯಕರ್ನಾಟಕ ಬೆಂಗಳೂರು ಸೌತ್ ವಿಂಗ್ ಪ್ರೆಸಿಡೆಂಟ್ ಆಗಿದ್ದಾರೆ. ಅಲ್ಲದೇ ಸುಮಂತ್ ಮಹಾಬಲ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ.

ಸುಮಂತ್ ಮತ್ತು ಶುಭಾ ಪೂಂಜಾ ಇಬ್ಬರು ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಎರಡು ಕುಟುಂಬದರು ಇವರ ಪ್ರೀತಿ ಒಪ್ಪಿಗೆ ಸೂಚಿಸಿದ್ದು, ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಇದೀಗ ಒಂದು ವರ್ಷದ ಪ್ರೀತಿಗೆ ಅಧಿಕೃತವಾಗಿ ಮದುವೆ ಎಂಬ ಮುದ್ರೆ ಬೀಳುತ್ತಿದೆ.

- Advertisement -

Latest News

error: Content is protected !!