Friday, May 10, 2024
Homeಮನರಂಜನೆತನ್ನ ಸಿಬ್ಬಂದಿಗೆ ಮತ್ತೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್ ಫೆರ್ನಾಂಡೀಸ್

ತನ್ನ ಸಿಬ್ಬಂದಿಗೆ ಮತ್ತೆ ಕಾರು ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್ ಫೆರ್ನಾಂಡೀಸ್

spot_img
- Advertisement -
- Advertisement -

ನವದೆಹಲಿ: ಹಿಂದೆ ತನ್ನ ಮೇಕಪ್ ಮ್ಯಾನ್ ಗೆ ಕಾರು ಗಿಫ್ಟ್ ನೀಡಿ ಸುದ್ದಿಯಾಗಿದ್ದ ನಟಿ ಜಾಕ್ವೆಲಿನ್ ಫೆರ್ನಾಂಡೀಸ್ ಇದೀಗ ಮತ್ತೆ ಅದೇ ರೀತಿ ಒಳ್ಳೆ ಕೆಲಸ ಮಾಡಿ ಅಭಿಮಾನಿಗಳ ದಿಲ್ ಕದ್ದಿದ್ದಾರೆ.

ಹೌದು. ಜಾಕ್ವೆಲಿನ್ ಅವರು ಮುಂಬೈಗೆ ಭೇಟಿ ನೀಡಿ, ತಮ್ಮ ಸಿಬ್ಬಂದಿಗೆ ಕಾರು ಕೀ ನೀಡುವ ಮೂಲಕ ದಸರಾ ಹಬ್ಬಕ್ಕೆ ಸರ್ಪ್ರೈಸ್ ಆಗಿ ಉಡುಗೊರೆ ನೀಡಿದ್ದಾರೆ. ಅಲ್ಲದೆ ಇದೇ ವೇಳೆ ಸಿಬ್ಬಂದಿ ಜೊತೆ ಸೇರಿ ಕಾರಿಗೆ ಆಯುಧ ಪೂಜೆ ಕೂಡ ನೆರವೇರಿಸಿದ್ದಾರೆ.ಜಾಕ್ವೆಲಿನ್ ಕಾರಿನ ಕೀ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶೇಷ ಅಂದರೆ ಇದೇ ಸಂದರ್ಭದಲ್ಲಿ ಜಾಕ್ವೆಲಿನ್ ಟ್ರಾಫಿಕ್ ಪೊಲೀಸ್ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. 

ಜಾಕ್ವೆಲಿನ್ ಅವರು ಸಿಬ್ಬಂದಿಗೆ ಗಿಫ್ಟ್ ಕೊಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಜಾಕ್ವೆಲಿನ್ ತನ್ನ ಮೆಕಪ್‍ಮೆನ್ ಹುಟ್ಟುಹಬ್ಬಕ್ಕೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರು. ನಟಿ ತನ್ನ ಜೊತೆ ಕೆಲಸ ಮಾಡುವ ಸಿಬ್ಬಂದಿಯನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿಯಾಗಿದೆ. ಜಾಕ್ವೆಲಿನ್ ಅವರು ಮೆಕಪ್‍ಮೆನ್ ಶಾನ್ ಮುತಾತಿಲ್‍ನ 34ನೇ ವರ್ಷದ ಹುಟ್ಟುಹಬ್ಬಕ್ಕೆ ಬ್ರ್ಯಾಂಡ್ ನ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

- Advertisement -
spot_img

Latest News

error: Content is protected !!