Saturday, May 18, 2024
Homeಮಹಾನ್ಯೂಸ್ಖ್ಯಾತ ನಟಿಗೆ ಚಾಕುವಿನಿಂದ ಇರಿದ ನಿರ್ಮಾಪಕ

ಖ್ಯಾತ ನಟಿಗೆ ಚಾಕುವಿನಿಂದ ಇರಿದ ನಿರ್ಮಾಪಕ

spot_img
- Advertisement -
- Advertisement -

ಮುಂಬೈ: ನಟಿ ಮಾಳವಿ ಮಲ್ಹೋತ್ರಾ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ನಟಿಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತನ್ನನ್ನು ನಿರ್ಮಾಪಕ ಅಂತ ಹೇಳಿಕೊಂಡಿರುವ ಯೋಗೇಶ್ ಹೆಸರಿನ ವ್ಯಕ್ತಿ ನಟಿಗೆ ಇರಿದಿದ್ದಾನೆ.

ಆರೋಪಿ ಯೋಗೇಶ್ ಮತ್ತು ನನ್ನ ಪರಿಚಯ ಫೇಸ್‍ಬುಕ್ ನಲ್ಲಿ ಆಗಿತ್ತು. ತದನಂತರ ಕೆಲಸದ ವಿಷಯವಾಗಿ ಒಮ್ಮೆ ಕಾಫಿ ಕೆಫೆಯಲ್ಲಿ ಯೋಗೇಶ್ ನನ್ನು ಭೇಟಿಯಾಗಿದ್ದೇನೆ. ಸೋಮವಾರ ರಾತ್ರಿ ಮನೆಯಿಂದ ಹೊರಗೆ ಹೋಗುತ್ತಿರುವಾಗ ರಸ್ತೆಯಲ್ಲಿ ಯೋಗೇಶ್ ತನ್ನ ಆಡಿ ಕಾರ್ ನಿಲ್ಲಿಸಿಕೊಂಡು ನಿಂತಿದ್ದನು. ರಸ್ತೆ ಮಧ್ಯೆ ನನ್ನನ್ನು ತಡೆಯಲು ಯೋಗೇಶ್ ಮುಂದಾದಾಗ ನಾವು ವಿರೋಧಿಸಿದೆ. ಇದರಿಂದ ಕೋಪಗೊಂಡ ಯೋಗೇಶ್ ಚಾಕುವಿನಿಂದ ನಾಲ್ಕು ಬಾರಿ ಹಲ್ಲೆ ನಡೆಸಿದನು. ನಂತರ ಘಟನಾ ಸ್ಥಳದಿಂದ ಯೋಗೇಶ್ ಪರಾರಿಯಾದನು ಎಂದು ಮಾಳವಿ ಮಲ್ಹೋತ್ರಾ ದೂರು ಸಲ್ಲಿಸಿದ್ದಾರೆ.

ಕೊಲೆ ಯತ್ನದಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿಯ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದುಕೊಂಡು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ಎಲ್ಲ ದೃಶ್ಯಗಳು ಸೆರೆಯಾಗಿವೆ.

ಮೂಲತಃ ಹಿಮಾಚಲ ಪ್ರದೇಶದರಾಗಿರುವ ಮಾಳವಿ ಮಲ್ಹೋತ್ರಾ ಮುಂಬೈನಲ್ಲಿ ನೆಲೆಸಿದ್ದಾರೆ. ತೆಲುಗಿನ ಕುಮಾರಿ 21 ಎಫ್, ತಮಿಳು ಸಿನಿಮಾ ನದಿಕ್ಕೂ ಎಂಡಿ, ಹಿಂದಿಯ ಹೋಟೆಲ್ ಮಿಲನ್ ಮತ್ತು ಉಡಾನ್ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳ ಜೊತೆಯಲ್ಲಿ ಹಲವು ಜಾಹೀರಾತುಗಳಲ್ಲಿ ಮಾಳವಿ ಕಾಣಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!