Friday, June 5, 2026
Homeತಾಜಾ ಸುದ್ದಿಆರೋಪ ಮಾಡ್ತಿರೋರು ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ: ನಿರ್ದೇಶಕ ಆರೂರು ಜಗದೀಶ್‌ಗೆ ನಟ ಅನಿರುದ್ಧ್...

ಆರೋಪ ಮಾಡ್ತಿರೋರು ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ: ನಿರ್ದೇಶಕ ಆರೂರು ಜಗದೀಶ್‌ಗೆ ನಟ ಅನಿರುದ್ಧ್ ಸವಾಲು ‌

- Advertisement -
- Advertisement -

ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆ ಜೊತೆಯಲಿ’ ಧಾರಾವಾಹಿ ವಿವಾದ ಭುಗಿಲೆದ್ದಿದೆ. ಕಿರುತೆರೆಯಿಂದ ನಟ ಅನಿರುದ್ಧ ಜತ್ಕರ್ ಅವರನ್ನು 2 ವರ್ಷ ಬ್ಯಾನ್ ಮಾಡಲಾಗಿದೆ. ನಿರ್ದೇಶಕ ಆರೂರು ಜಗದೀಶ್‌, ಅನಿರುದ್ಧ್ ಜತ್ಕರ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಎಲ್ಲದಕ್ಕೂ ಅನಿರುದ್ಧ ಜತ್ಕರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇಂದು ಸುದ್ದಿಗೋಷ್ಠಿ ನಡೆಸಿದ ಅನಿರುದ್ಧ ಜತ್ಕರ್ ವಿವಾದದ ಬಗ್ಗೆ ಮಾತನಾಡಿದ್ದಾರೆ. ‘’ಸ್ಕ್ರಿಪ್ಟ್ ವಿಚಾರಕ್ಕೆ ಮನಸ್ತಾಪ ಆಗಿದೆ. ಒಂದು ಮನೆ ಅಂದ್ಮೇಲೆ ಭಿನ್ನಾಭಿಪ್ರಾಯ ಸಹಜ. ಅದನ್ನ ಬೀದಿಗೆ ತರಬಾರದು. ನನ್ನ ಮೇಲೆ ಆರೋಪಗಳನ್ನ ಮಾಡ್ತಿರೋರು ತಮ್ಮ ಮಕ್ಕಳ ಮೇಲೆ ಆಣೆ ಮಾಡಿ ಹೇಳಲಿ’’ ಎಂದು ಸುದ್ದಿಗೋಷ್ಠಿಯಲ್ಲಿ ಅನಿರುದ್ಧ ಜತ್ಕರ್ ಹೇಳಿದ್ದಾರೆ.

- Advertisement -

Latest News

error: Content is protected !!