Thursday, June 4, 2026
Homeತಾಜಾ ಸುದ್ದಿಪೋಲಿಸ್ ಅಧಿಕಾರಿಯಂತೆ ವೇಷತೊಟ್ಟು ಅಂಗಡಿ ಮಾಲೀಕರನ್ನು ಹೆದರಿಸಿ ಹಣ ವಸೂಲಿ, ಖದೀಮ ಅಂದರ್ !

ಪೋಲಿಸ್ ಅಧಿಕಾರಿಯಂತೆ ವೇಷತೊಟ್ಟು ಅಂಗಡಿ ಮಾಲೀಕರನ್ನು ಹೆದರಿಸಿ ಹಣ ವಸೂಲಿ, ಖದೀಮ ಅಂದರ್ !

- Advertisement -
- Advertisement -

ಬೆಂಗಳೂರು: ಪೋಲಿಸ್ ಅಧಿಕಾರಿಯಂತೆ ವೇಷತೊಟ್ಟು ಅಂಗಡಿ ಮಾಲೀಕರನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖದೀಮನನ್ನು ವ್ಯಾಪಾರಿಗಳೇ ಹಿಡಿದು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶ್ರೀರಾಮಪುರದ ವಿಘ್ನೇಶ್‌(23) ಬಂಧಿತ ಆರೋಪಿ. ಆರೋಪಿಯಿಂದ 4500 ರು. ನಗದು, ಮೊಬೈಲ್‌ ಫೋನ್‌ ಜಪ್ತಿ ಮಾಡಲಾಗಿದೆ. ಆರೋಪಿಯು ಸಿಟಿ ಮಾರ್ಕೆಟ್‌, ಚಿಕ್ಕಪೇಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡು ವ್ಯಾಪಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ.

ಜೆ.ಪಿ.ಸ್ಟ್ರೀಟ್‌ನಲ್ಲಿ ಅಂಗಡಿಯೊಂದಕ್ಕೆ ಹೋದ ಆರೋಪಿ, ನಾನು ಪೊಲೀಸ್‌ ಅಧಿಕಾರಿ, ಪೊಲೀಸ್‌ ಕಮಿಷನರ್‌ ಆಫೀಸ್‌ನಿಂದ ಬಂದಿದ್ದಾನೆ. ನಿಮ್ಮ ಅಂಗಡಿಯನ್ನು ತಪಾಸಣೆ ಮಾಡಬೇಕು ಎಂದಿದ್ದಾನೆ. ಈ ವೇಳೆ ಅಂಗಡಿ ಮಾಲೀಕ ಅನುಮಾನಗೊಂಡು ಪೊಲೀಸ್‌ ಗುರುತಿನ ಚೀಟಿ ತೋರಿಸು ಎಂದಿದ್ದಾರೆ. ಆಗ ಈತನ ಅಸಲಿ ನಾಟಕ ಬಟಾಬಯಲಾಗಿದೆ.

- Advertisement -

Latest News

error: Content is protected !!