Monday, June 8, 2026
Homeಕರಾವಳಿಉಡುಪಿಆಸಿಡ್ ನಾಗನಿಗೆ ಅತ್ಯಾಚಾರಿಗೆ ವಿಧಿಸುವ ಶಿಕ್ಷೆ ವಿಧಿಸಬೇಕು : ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ...

ಆಸಿಡ್ ನಾಗನಿಗೆ ಅತ್ಯಾಚಾರಿಗೆ ವಿಧಿಸುವ ಶಿಕ್ಷೆ ವಿಧಿಸಬೇಕು : ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ

- Advertisement -
- Advertisement -

ಉಡುಪಿ: ಬೆಂಗಳೂರಿನಲ್ಲಿ ಯುವತಿ ಮೇಲೆ ಆಸಿಡ್ ಎರಚಿದ ಪ್ರಕರಣ ಸಂಬಂಧ ಬಂಧಿತ ಆರೋಪಿ ಆಸಿಡ್ ನಾಗನಿಗೆ ಅತ್ಯಾಚಾರ ಆರೋಪಿಗೆ ಆಗುವ ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಶೋಭಾ ಕರಂದ್ಲಾಜೆ, ಮುಂದೆ ಈ ರೀತಿಯ ಮಾನಸಿಕತೆ ಸಮಾಜದಲ್ಲಿ ನಿರ್ಮಾಣ ಆಗಬಾರದು, ಆಸಿಡ್ ದಾಳಿಗೊಳಗಾದ ಯುವತಿ ಬದುಕಿದ್ದು ಸತ್ತಂತೆ, ಕೊಲೆಗೆ ವಿಧಿಸುವ ಶಿಕ್ಷೆಗೆ ನಾಗನನ್ನು ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ನಮ್ಮ ಸಮಾಜದಲ್ಲಿ ಇಂತಹವರು ಇದ್ದಾರಾ ಅಂತ ಆತಂಕ ಆಗುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ, ಗೃಹ ಸಚಿವರಿಗೆ ಈಗಾಗಲೇ ಈ ಒತ್ತಾಯ ಮಾಡಿದ್ದೇನೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ‌

- Advertisement -

Latest News

error: Content is protected !!