Monday, April 29, 2024
Homeತಾಜಾ ಸುದ್ದಿಕಪ್ಪು ಎಂದು ತಿರಸ್ಕರಿಸಿದ್ದ ಜನ ಈಗ ಆ ನಟಿಯ ಡೇಟ್ಸ್ ಗೆ ಕ್ಯೂ ನಿಲ್ಲುತ್ತಿದ್ದಾರೆ!

ಕಪ್ಪು ಎಂದು ತಿರಸ್ಕರಿಸಿದ್ದ ಜನ ಈಗ ಆ ನಟಿಯ ಡೇಟ್ಸ್ ಗೆ ಕ್ಯೂ ನಿಲ್ಲುತ್ತಿದ್ದಾರೆ!

spot_img
- Advertisement -
- Advertisement -

ಸಿನಿಮಾದಲ್ಲಿ ಅವಕಾಶಕ್ಕಾಗಿ ಫೋಟೋ ಕಳುಹಿಸಿದರೆ ಹುಡುಗಿ ಸ್ವಲ್ಪ ಕಪ್ಪು ಎಂದು ತುಂಬಾ ಜನ ಅವಕಾಶ ಕೊಡಲು ಹಿಂದೇಟು ಹಾಕಿದ್ದರು.ತಾನೊಬ್ಬ ಪ್ರಸಿದ್ಧ ಕುಟುಂಬದಿಂದ ಬಂದಿದ್ದರೂ ಅವಕಾಶಗಳು ಸಿಗಲಿಲ್ಲ ಆದರೂ ತನ್ನ ಗುರಿಯ ಬೆನ್ನಟ್ಟಿ ನಿಂತ ಈ ಹುಡುಗಿ ಈಗ ಇಂಡಿಯಾದ ಟಾಪ್ ನಟಿ.ಹಾಗಾದ್ರೆ ಆಕೆ ಯಾರು ?ಆ ನಟಿಯ ಬಗ್ಗೆ ತಿಳಿಯೋಣ ಬನ್ನಿ..

2001ರಲ್ಲಿ ಈಕೆ ಹೀರೋಯಿನ್ನಾ ? ಇಷ್ಟು ಕಪ್ಪಗಿದ್ದಾಳೆ ಪರ್ವಾಗಿಲ್ಲ ಆದ್ರೆ ಸ್ವಲ್ಪ ದಪ್ಪ ಇದ್ದಿದ್ರೆ ಚೆನ್ನಾಗಿರೋದು ಎಂದರೂ ಆಡಿಷನ್ ನಲ್ಲಿ ಫೋಟೋ ನೋಡಿದ ಸಿನಿ ಜನ .2020ರಲ್ಲಿ ಈ ನಟಿ ಡೇಟ್ಸ್ ಕೊಟ್ಟರೆ ಸಾಕು , ಎಷ್ಟು ಕೋಟಿ ಬೇಕಾದ್ರೂ ಕೊಡ್ತೀವಿ ಎನ್ನುತ್ತಿದ್ದರೆ ಅದೇ ಸಿನಿ ಜನ.ಆ ನಟಿ ಯಾರೆಂದರೆಕನ್ನಡದಲ್ಲಿ ಮೊದಲು ನಟಿಸಿ ಈಗ ಬಾಲಿವುಡ್ ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿರುವ ದೀಪಿಕಾ ಪಡುಕೋಣೆ

ಉಡುಪಿಯವರಾದ ಪ್ರಕಾಶ್ ಪಡುಕೋಣೆಯವರು ಡೆನ್ಮಾರ್ಕ್ ನಲ್ಲಿದ್ದಾಗ ದೀಪಿಕಾ ಪಡುಕೋಣೆ ಹುಟ್ಟಿದರು ನಂತರ ದೀಪಿಕಾಗೆ 11 ವರ್ಷ ಇದ್ದಾಗ ವಾಪಸ್ ಬೆಂಗಳೂರಿಗೆ ಬಂದು ನೆಲೆಸಿದರು.ದೀಪಿಕಾ ಅವರ ತಂದೆ ನಮಗೆಲ್ಲರಿಗೂ ಗೊತ್ತಿರುವ ಬ್ಯಾಡ್ಮಿಂಟನ್ ಪ್ಲೇಯರ್ ಪ್ರಕಾಶ್ ಪಡುಕೋಣೆ .ತಂದೆಯ ಹಾಗೆ ದೀಪಿಕಾ ಕೂಡ ಅಥ್ಲೆಟ್ .ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

ಈಕೆಯ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯ ಅಂದ್ರೆ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ಪ್ಲೇಯರ್ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಬೇಸ್ ಬಾಲ್ ಪ್ಲೇಯರ್ ಕೂಡ ಆದ್ರೆ ಮಾಡಲಿಂಗ್ ಮೇಲೆ ಆಸಕ್ತಿಯಿಂದ ಕ್ರೀಡೆಗೆ ಬೈ ಹೇಳಿದರು ನಂತರ ತುಂಬಾ ಜಾಹೀರಾತುಗಳಲ್ಲಿ ನಟಿಸಿದ ದೀಪಿಕಾ ಪ್ರಾರಂಭದಲ್ಲಿ ಸಿನಿಮಾ ಅವಕಾಶಕ್ಕಾಗಿ ಎಲ್ಲಿಲ್ಲದ ಕಷ್ಟ ಪಟ್ಟರು.

ಸಿನಿಮಾ ಅವಕಾಶಗಳಿಗಾಗಿ ಫೋಟೋ ಕಳುಹಿಸಿದರೆ ಎಲ್ಲ ನಿರ್ಮಾಪಕರು ದೀಪಿಕಾರನ್ನು ರಿಜೆಕ್ಟ್ ಮಾಡುತ್ತಿದ್ದರು ಅದಕ್ಕೆ ಅವರು ಕೊಡುತ್ತಿದ್ದ ಕಾರಣ ಹುಡುಗಿ ಸ್ವಲ್ಪ ಕಪ್ಪು ಹಾಗೂ ತುಂಬಾ ಸಣ್ಣಗಿದ್ದಾರೆ ಎಂದು ಆದರೆ ಪಟ್ಟು ಬಿಡದೆ ಮತ್ತೆ ಹತ್ತಾರು ಜಾಹೀರಾತುಗಳಲ್ಲಿ ನಟಿಸಿದ ದೀಪಿಕಾ 2005ರಲ್ಲಿ ಮಾಡಲ್ ಆಫ್ ದಿ ಇಯರ್ ಪಟ್ಟವನ್ನು ಧರಿಸಿದರು.

ಹೀಗೆ ಸಿನಿಮಾ ಅವಕಾಶಗಳಿಗಾಗಿ ಪರದಾಡುತ್ತಿದ್ದ ದೀಪಿಕಾ ಪಡುಕೋಣೆಗೆ ಮೊದಲು ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ.ಅವಕಾಶಗಳಿಗಾಗಿ ತಿರುಗಾಡುತ್ತಿದ್ದ ದೀಪಿಕಾ ಪಡುಕೋಣೆಯನ್ನು ಕರೆದು ಐಶ್ವರ್ಯ ಚಿತ್ರದಲ್ಲಿ ಅವಕಾಶ ಕೊಟ್ಟರೂ ಇಂದ್ರಜಿತ್ ಲಂಕೇಶ್ ಆನಂತರ ಹಿಮೇಶ್ ರೇಶ್ಮಿ ಆಲ್ಬಂನಲ್ಲಿ ನಟಿಸಿದರು ದೀಪಿಕಾ.ಆ ಆಲ್ಬಂ ನೋಡಿದ ನಿರ್ದೇಶಕಿ ಫಾರಾ ಖಾನ್ ಶಾರುಖ್ ಖಾನ್ ಗೆ ನಾಯಕಿಯಾಗಿ ಓಂ ಶಾಂತಿ ಓಂ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು ಆ ನಂತರ ಹಿಂತಿರುಗಿ ನೋಡಲಿಲ್ಲ ದೀಪಿಕಾ ಪಡುಕೋಣೆ.

- Advertisement -
spot_img

Latest News

error: Content is protected !!