Wednesday, October 7, 2026
Homeಅಪರಾಧ15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ

15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗೆ ನ್ಯಾಯಾಂಗ ಬಂಧನ

- Advertisement -
- Advertisement -

ಬಂಟ್ವಾಳ: ಬ್ಯಾಂಕ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಇಬ್ಬರಿಂದ ಹಣ ಪಡೆದು ವಂಚಿಸಿದ ಪ್ರಕರಣದಲ್ಲಿ ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಲ್ನಾಡು ನಿವಾಸಿ ಹಿಬ್ಬಾತುಲ್ಲ (52) ಎಂದು ಗುರುತಿಸಲಾಗಿದೆ.

2011ರಲ್ಲಿ ಬ್ಯಾಂಕ್ ಉದ್ಯೋಗ ಕೊಡಿಸುವುದಾಗಿ ಇಬ್ಬರಿಂದ ಹಣ ಪಡೆದು, ಉದ್ಯೋಗ ಕೊಡಿಸದೆ ಹಣವನ್ನೂ ಹಿಂದಿರುಗಿಸದ ಆರೋಪದಡಿ ಹಿಬ್ಬಾತುಲ್ಲ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾರ್ಯಾಚರಣೆ ನಡೆಸಿದ ವಿಟ್ಲ ಪೊಲೀಸರು ಅಕ್ಟೋಬರ್ 5ರಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!