Monday, June 8, 2026
Homeಕರಾವಳಿಮಂಗಳೂರು; ಹಣ ಕೇಳಿದಕ್ಕೆ ಫಾಝಿಲ್ ಕೊಲೆ ಆರೋಪಿ ಜೀವ ಬೆದರಿಕೆ ಹಾಕಿದ ಆರೋಪ

ಮಂಗಳೂರು; ಹಣ ಕೇಳಿದಕ್ಕೆ ಫಾಝಿಲ್ ಕೊಲೆ ಆರೋಪಿ ಜೀವ ಬೆದರಿಕೆ ಹಾಕಿದ ಆರೋಪ

- Advertisement -
- Advertisement -

ಮಂಗಳೂರು: ಹಣ ಕೇಳಿದ್ದಕ್ಕೆ ಇಲ್ಲ ಅಂದ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಫಾಝಿಲ್ ಕೊಲೆ ಆರೋಪಿ ಹರ್ಷಿತ್  ಜೀವ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಉಳ್ಳಾಲ ಠಾಣಾ ವ್ಯಾಪ್ತಿಯ ಮಾಡೂರು ಬಳಿ ಈ ಘಟನೆ ನಡೆದಿದ್ದು, ಈ ಬಗ್ಗೆ ಉದಯಕುಮಾರ್ ಎಂಬವರು ನೀಡಿದ್ದು,  ಹರ್ಷಿತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರ್ಷಿತ್ ಎಂಬಾತ ಫೆ.2ರಂದು ಮಾಡೂರು ನಿವಾಸಿ ಬಸ್ ನಿರ್ವಾಹಕ ಉದಯ್ ಕುಮಾರ್ ಎಂಬವರಿಗೆ ಕರೆ ಮಾಡಿ ನಾನು ಪಾಝಿಲ್ ಕೊಲೆ ಆರೋಪಿ . ಈಗ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದೇನೆ. ನನಗೆ ಧನ ಸಹಾಯ ನೀಡಬೇಕು ಎಂದು ವಿನಂತಿಸಿದ್ದ ಎನ್ನಲಾಗಿದೆ. ಇದಕ್ಕೆ ಉದಯ್ ಕುಮಾರ್ ನಿರಾಕರಿಸಿದ್ದಾರೆ. ಇದರ ಬಳಿಕ ಫೆ.6 ರಂದು ಹರ್ಷಿತ್ ಉದಯ್ ಗೆ ಮತ್ತೊಮ್ಮೆ ಕರೆ ಮಾಡಿ ನನಗೆ ಮತ್ತು ಜೈಲಿನಲ್ಲಿ ಇರುವವರಿಗೆ ಧನ ಸಹಾಯ ನೀಡಬೇಕು ಎಂದು ಕೇಳಿದ್ದ ಎನ್ನಲಾಗಿದೆ. ಇದಕ್ಕೆ ಉದಯ್ ರವರು ಒಪ್ಪದ ಕಾರಣ ಹರ್ಷಿತ್ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಉದಯ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!