Saturday, June 27, 2026
Homeಕರಾವಳಿಬೆಂಗಳೂರಿನಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ತೂರಿನ ಯುವಕ ಸಾವು

ಬೆಂಗಳೂರಿನಲ್ಲಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪುತ್ತೂರಿನ ಯುವಕ ಸಾವು

- Advertisement -
- Advertisement -

ಬೆಂಗಳೂರು: ಡಿವೈಡರ್ ಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಪುತ್ತೂರಿನ ಕೂರ್ನಡ್ಕ ನಿವಾಸಿ ಆಶಿಕ್ ಸುನೈಫ್ (21) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಪುತ್ತೂರಿನ ಬಸ್ ಸ್ಟ್ಯಾಂಡ್ ಬಳಿ ಬರುವ ಬ್ಯಾಗ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುನೈಫ್ ಸ್ನೇಹಿತ ರವೂಫ್ ಜೊತೆ ಆಕ್ಟೀವಾದಲ್ಲಿ ಬೆಂಗಳೂರಿಗೆ ಹೊರಟಿದ್ದ. ಇನ್ನೇನು ಬೆಂಗಳೂರು ತಲುಪಬೇಕು ಎನ್ನುವಷ್ಟರಲ್ಲಿ ಆಕ್ಟೀವಾ ಡಿವೈಡರ್ ಗೆ ಡಿಕ್ಕಿ ಹೊಡೆದು ಸುನೈಫ್ ಗಂಭೀರವಾಗಿ ಗಾಯಗೊಂಡಿದ್ದ. ಈತನನ್ನು ಬೆಂಗಳೂರಿನ ನಿಮ್ಸಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಆತ ನಿನ್ನ ಮೃತಪಟ್ಟಿದ್ದಾನೆ.

- Advertisement -

Latest News

error: Content is protected !!