Tuesday, July 14, 2026
Homeಉತ್ತರ ಕನ್ನಡಸೇತುವೆ ಮೇಲೆ ಅಪಘಾತ :ನದಿಗೆ ಬಿದ್ದ ಬೈಕ್ ಸವಾರರು

ಸೇತುವೆ ಮೇಲೆ ಅಪಘಾತ :ನದಿಗೆ ಬಿದ್ದ ಬೈಕ್ ಸವಾರರು

- Advertisement -
- Advertisement -

ಹೊನ್ನಾವರ: ಸೇತುವೆ ಮೇಲೆ ಅಪಘಾತ ಸಂಭವಿಸಿ ಬೈಕ್ ಸವಾರರು ಇಬ್ಬರು ನದಿಗೆ ಬಿದ್ದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರದ ಶರಾವತಿ ಸೇತುವೆಯಲ್ಲಿ ಈ ಅಪಘಾತ ಸಂಭವಿಸಿದೆ.

ಅಕ್ಷಯ್ (26) ಮತ್ತು ಸುನೀಲ್ (27) ನದಿಗೆ ಬಿದ್ದ ಬೈಕ್ ಸವಾರರಾಗಿದ್ದು, ಕಾರ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ರಭಸಕ್ಕೆ ಬೈಕ್ ನಲ್ಲಿದ್ದ ಯುವಕರು ನದಿಗೆ ಬಿದ್ದಿದ್ದಾರೆ‌.

ಯುವಕರ ಪೈಕಿ ಸುನೀಲ್ ಎಂಬಾತ ಈಜುತ್ತಾ ದಡಕ್ಕೆ ಬಂದಿದ್ದು, ಇನ್ನೋರ್ವ ಯುವಕ ಅಕ್ಷಯ್ ನಾಪತ್ತೆಯಾಗಿದ್ದಾನೆ.‌ ನಾಪತ್ತೆಯಾದ ಅಕ್ಷಯ್ ಗಾಗಿ ಹುಡುಕಾಟ ಮುಂದುವರಿದಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಈಜು ತಜ್ಞರು, ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌. ಹೊನ್ನಾವರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌

- Advertisement -

Latest News

error: Content is protected !!