Thursday, June 25, 2026
Homeಅಪರಾಧಮೂರನೇ ತರಗತಿಯ ಬಾಲಕಿಯ ಮೇಲೆ 71 ವರ್ಷದ ಪ್ರಾಂಶುಪಾಲನಿಂದ ಅತ್ಯಾಚಾರ

ಮೂರನೇ ತರಗತಿಯ ಬಾಲಕಿಯ ಮೇಲೆ 71 ವರ್ಷದ ಪ್ರಾಂಶುಪಾಲನಿಂದ ಅತ್ಯಾಚಾರ

- Advertisement -
- Advertisement -

ಉತ್ತರಪ್ರದೇಶ: ಮೂರನೇ ತರಗತಿಯ ಬಾಲಕಿಯ ಮೇಲೆ 71 ವರ್ಷದ ಪ್ರಾಂಶುಪಾಲ ಅತ್ಯಾಚಾರವೆಸಗಿರುವ ಘಟನೆ ಉತ್ತರಪ್ರದೇಶದ ಮುಜಾಫರ್‌ ನಗರದಲ್ಲಿ ನಡೆದಿದೆ.

ವೃದ್ಧ ಪ್ರಾಂಶುಪಾಲನನ್ನ ಇದೀಗ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಅಷ್ಟೇ ಅಲ್ದೇ ಪ್ರಾಂಶುಪಾಲನ ಅಪರಾಧದ ವಿವರಗಳನ್ನು ಮರೆಮಾಚಿದ ಆರೋಪದಲ್ಲಿ ಅದೇ ಶಾಲೆಯ ಶಿಕ್ಷಕನನ್ನೂ ಕೂಡ ಬಂಧಿಸಲಾಗಿದೆ.

ಬಾಲಕಿ ಮನೆಗೆ ತೆರಳಿದಾಗ ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಇದನ್ನ ಗಮನಿಸಿದ ಕುಟುಂಬಸ್ಥರು ವಿಚಾರಿಸಿದ್ದಾರೆ. ಆದ್ರೆ ಆಗ ಬಾಲಕಿ ಭಯದಿಂದ ಏನೂ ಹೇಳಿಲ್ಲ. ಆದರೆ ನೋವಿನಿಂದ ನರಳಾಡುತ್ತಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋದ ನಂತರ ಅತ್ಯಾಚಾರವಾಗಿರುವುದು ಬೆಳಕಿಗೆ ಬಂದಿದೆ. ನಂತರ ಬಾಲಕಿಯನ್ನು ವಿಚಾರಿಸಿದಾಗ ಸತ್ಯ ತಿಳಿಸಿದ್ದಾಳೆ. ಕೂಡಲೇ ಪೊಲೀಸರು ಪ್ರಾಂಶುಪಾಲನ ವಿರುದ್ಧ ದೂರು ದಾಖಲಿಸಿದ್ಧಾರೆ.

- Advertisement -

Latest News

error: Content is protected !!