Thursday, June 4, 2026
Homeಕರಾವಳಿಉಡುಪಿಕಾರ್ಕಳ; ಹೆಬ್ರಿಯಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

ಕಾರ್ಕಳ; ಹೆಬ್ರಿಯಲ್ಲಿ ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವು

- Advertisement -
- Advertisement -

ಕಾರ್ಕಳ; ವಿದ್ಯುತ್ ಕಂಬಕ್ಕೆ ಸ್ಕೂಟರ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ಹೆಬ್ರಿ ಸಮೀಪದ ವರಂಗದ ಮಾತಿಬೆಟ್ಟು ಎಂಬಲ್ಲಿ ನಡೆದಿದೆ.ಸೂರಿಮಣ್ಣು ನಿವಾಸಿ ಪ್ರಭಾಚಂದ್ರ ಆಚಾರ್ಯ ಮೃತ ದುರ್ದೈವಿ.

ಪ್ರಭಾಚಂದ್ರ ಅವರು ನಿನ್ನೆ ಮಧ್ಯಾಹ್ನ ಸ್ಕೂಟರ್ ನಲ್ಲಿ ಮುನಿಯಾಲುಯಿಂದ ಸೂರಿಮಣ್ಣು ಕಡೆಗೆ ಹೋಗುತ್ತಿದ್ದಾಗ
ವರಂಗ ಗ್ರಾಮದ ಮಾತಿಬೆಟ್ಟು ಹಾಲಿನ ಡೈರಿ ತಿರುವಿನಲ್ಲಿ ಸ್ಕೂಟರ್ ರಸ್ತೆಯ ಎಡಬದಿಗೆ ಚಲಿಸಿ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಭಾಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!