- Advertisement -
![]()
- Advertisement -
ಬೆಳ್ತಂಗಡಿ : ನಗರದ ಕೆ.ಸ್ ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ನಿರ್ವಾಹಕನ ಕಾಲಿನ ಮೇಲೆ ಖಾಸಗಿ ವಾಹನ ಹರಿದು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.

ಮಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿತ್ತು. ನಿರ್ವಾಹಕ ಮಾರುತಿ ಸಂತಗೋಲ್ ಅವರು ಬಸ್ಸಿನ ಮುಂದೆ ನಿಂತಿದ್ದ ವೇಳೆ ಬಸ್ ನಿಲ್ದಾಣದೊಳಗೆ ವೇಗವಾಗಿ ಬಂದ ನೋಂದಣಿಯಾಗದ ಗೂಡ್ಸ್ ವಾಹನ ಮಾರುತಿ ಅವರ ಎಡ ಕಾಲಿನ ಪಾದದ ಮೇಲಿನಿಂದ ಗೂಡ್ಸ್ ವಾಹನದ ಟಯರ್ ಹರಿದುಹೋಗಿದೆ. ಅವರ ಎಡ ಕಾಲಿನ ಪಾದಕ್ಕೆ ಗಾಯಗಳಾಗಿದ್ದು ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬಗ್ಗೆ ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ
- Advertisement -


