Saturday, June 27, 2026
Homeಕರಾವಳಿಪುತ್ತೂರಿನಲ್ಲಿ ಸರ್ಕಾರಿ ಬಸ್ ನಲ್ಲಿ ವಿವಾಹಿತೆಯ ಸೊಂಟಕ್ಕೆ ಕೈ ಹಾಕಿದ ವೃದ್ಧ

ಪುತ್ತೂರಿನಲ್ಲಿ ಸರ್ಕಾರಿ ಬಸ್ ನಲ್ಲಿ ವಿವಾಹಿತೆಯ ಸೊಂಟಕ್ಕೆ ಕೈ ಹಾಕಿದ ವೃದ್ಧ

- Advertisement -
- Advertisement -

ಪುತ್ತೂರು; ವೃದ್ಧನೊಬ್ಬ ಸರ್ಕಾರಿ ಬಸ್ ನಲ್ಲಿ ವಿವಾಹಿತೆಯ ಸೊಂಟಕ್ಕೆ ಕೈ ಹಾಕಿದ ಘಟನೆ ಕಬಕ ಗ್ರಾಮದ ಮುರ ಎಂಬಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಮ್ಮಿಂಜೆ ಗ್ರಾಮದ ವೃದ್ಧನನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಗ್ರಾಮದ ಕನ್ಯಾನ ಕುಕ್ಕಾಜೆ ನಿವಾಸಿ ವಿವಾಹಿತ ಮಹಿಳೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮುರ ಎಂಬಲ್ಲಿ ವೃದ್ಧ ವ್ಯಕ್ತಿಯೊಬ್ಬ ಮಹಿಳೆಯ ಸೊಂಟ ಹಿಡಿದಿದ್ದಾನೆ. ಅಲ್ಲದೇ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

ಇನ್ನು ಘಟನೆ ನಡೆಯುತ್ತಿದ್ದಂತೆ ಮಹಿಳೆ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಮಹಿಳೆ ಆತನನ್ನು ಪ್ರಶ್ನಿಸುತ್ತಿದ್ದಂತೆ ಆತ ಬೊಳುವಾರು ಬಳಿ ಬಸ್‌ನಿಂದ ಇಳಿದು ಹೋಗಿದ್ದಾನೆ. ಈ ಕುರಿತಂತೆ ಸಂತ್ರಸ್ತ ಮಹಿಳೆ  ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸದ್ಯ ಆರೋಪಿಯು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ ಎನ್ನಲಾಗಿದೆ.

- Advertisement -

Latest News

error: Content is protected !!