Thursday, June 4, 2026
Homeಕರಾವಳಿಉಡುಪಿಪಡುಬಿದ್ರೆ: ಉಚ್ಚಿಲದಲ್ಲಿ ಅಪರಿಚಿತ ವಾಹನ ಡಿಕ್ಕಿಯಾದ ಪ್ರಕರಣ: ಗಾಯಾಳು ಮಗ ಕೂಡಾ ಚಿಕಿತ್ಸೆ ಫಲಿಸದೇ ನಿಧನ

ಪಡುಬಿದ್ರೆ: ಉಚ್ಚಿಲದಲ್ಲಿ ಅಪರಿಚಿತ ವಾಹನ ಡಿಕ್ಕಿಯಾದ ಪ್ರಕರಣ: ಗಾಯಾಳು ಮಗ ಕೂಡಾ ಚಿಕಿತ್ಸೆ ಫಲಿಸದೇ ನಿಧನ

- Advertisement -
- Advertisement -

ಪಡುಬಿದ್ರೆ: ನಿನ್ನೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಅಪಘಾತದಲ್ಲಿ ಬೆಳಗಾವಿ ಮೂಲದ ಪ್ರಭಾಕರ್ ಶಂಕರ್  ಸ್ಥಳದಲ್ಲಿಯೇ ಮೃತಪಟ್ಟಿದ್ರು. ಗಂಭೀರ ಗಾಯಗೊಂಡಿದ್ದ ಅವರ ಮಗ ಸಮರ್ಥ್ ಇವತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ಬೆಳಗಾವಿಯಿಂದ ಉಚ್ಚಿಲಕ್ಕೆ ಬಂದಿದ್ದ ಅಪ್ಪ ಮಗ ಬುಧವಾರ ಬೆಳಿಗ್ಗೆ ಬಸ್ಸಿನಿಂದ ಇಳಿದು ರಸ್ತೆ ಬದಿಯಲ್ಲಿ ನಿಂತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿಯಾಗಿತ್ತು. ಅಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ರು. ಮಗನನ್ನ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಲಾಯ್ತಾದ್ರೂ ಚಿಕಿತ್ಸೆ ಫಲಿಸದೇ ಇಂದು ಮಗ ಕೂಡಾ ಸಾವನ್ನಪ್ಪಿದ್ದಾನೆ.

- Advertisement -

Latest News

error: Content is protected !!