Saturday, June 13, 2026
Homeಕರಾವಳಿಉಡುಪಿಉಡುಪಿ: ಬೈಕಿಗೆ ಟಿಪ್ಪರ್ ಲಾರಿ ಢಿಕ್ಕಿ; ಬೈಕ್ ಸವಾರ ಸಾವು

ಉಡುಪಿ: ಬೈಕಿಗೆ ಟಿಪ್ಪರ್ ಲಾರಿ ಢಿಕ್ಕಿ; ಬೈಕ್ ಸವಾರ ಸಾವು

- Advertisement -
- Advertisement -

ಉಡುಪಿ: ಬೈಕಿಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನಾಲ್ಕೂರು ಗ್ರಾಮದ ಮಿಯ್ಯಾರು ಬಿಕ್ರಿಜಡ್ಡು ಎಂಬಲ್ಲಿನ ತಿರುವಿನ ಬಳಿ ನಡೆದಿದೆ. ಮೃತರನ್ನು ಸುದರ್ಶನ್ (28) ಎಂದು ಗುರುತಿಸಲಾಗಿದೆ.

ನಂಚಾರು ಕಡೆಯಿಂದ ಮುದ್ದೂರು ಕಡೆಗೆ ಹೋಗುತ್ತಿದ್ದ ಬೈಕಿಗೆ ಎದುರಿನಿಂದ ಮುದ್ದೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿದೆ. ಬಳಿಕ ಲಾರಿಯು ಸವಾರನನ್ನು ಬೈಕ್ ಸಮೇತ ಸುಮಾರು 15 ಅಡಿಯವರೆಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿತ್ತೆಂದು ತಿಳಿದುಬಂದಿದೆ. ಇದರಿಂದ ಗಂಭೀರ ವಾಗಿ ಗಾಯಗೊಂಡ ಸುದರ್ಶನ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!