Sunday, June 7, 2026
Homeಕರಾವಳಿಉಡುಪಿಉಡುಪಿ: ಸ್ಕೂಟರಿಗೆ ಢಿಕ್ಕಿ ಹೊಡೆದ ಕಾರು, ಸ್ಕೂಟರ್ ಸವಾರ ಸಾವು

ಉಡುಪಿ: ಸ್ಕೂಟರಿಗೆ ಢಿಕ್ಕಿ ಹೊಡೆದ ಕಾರು, ಸ್ಕೂಟರ್ ಸವಾರ ಸಾವು

- Advertisement -
- Advertisement -

ಉಡುಪಿ: ಸ್ಕೂಟರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಿನ್ನೆ ಸಂಜೆ ಅಂಬಾಗಿಲು ಸಮೀಪದ ದುರ್ಗಾ ಜನರಲ್ ಸ್ಟೋರ್ ಎದುರು ನಡೆದಿದೆ.

ಪುತ್ತೂರು ಗ್ರಾಮದ ಹನುಮಂತನಗರದ ರವಿಚಂದ್ರ ದೇವಾಡಿಗ (57) ಮೃತ ದುರ್ದೈವಿ. ಇವರು ದುರ್ಗಾ ಜನರಲ್‌ ಸ್ಟೋರ್‌ ಎದುರು ತನ್ನ ಸ್ಕೂಟರ್‌ ನಲ್ಲಿ ಡಿವೈಡರ್‌ ಬಳಿ ಸೂಚನೆ ನೀಡಿ ತಿರಗಿಸುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಸ್ಕೂಟರ್‌ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡ ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.

- Advertisement -

Latest News

error: Content is protected !!