- Advertisement -
![]()
- Advertisement -
ಕಡಬ: ಕಾರು ಮತ್ತು ಆಟೋ ನಡುವೆ ಅಪಘಾತ ಸಂಭವಿಸಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಅನುಗ್ರಹ ಸಭಾ ಭವನದ ಬಳಿ ನಡೆದಿದೆ.ಅಪಘಾತದಲ್ಲಿ ಆಟೋ ಚಾಲಕ ಆದಂ ಮತ್ತು ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಗಾಯಗೊಂಡಿದ್ದು ಅವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಖ್ಯ ರಸ್ತೆಯಲ್ಲಿ ಕಳಾರ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾ ಕ್ಕೆ ಅನುಗ್ರಹ ಸಭಾ ಭವನದ ಬಳಿಯ ಗೂಡಂಗಡಿ ಬಳಿ ನಿಂತಿದ್ದ ಕಾರು ಏಕಾಏಕಿ ಬಂದ ಹಿನ್ನೆಲೆ ಈ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಅಪಘಾತದ ರಭಸಕ್ಕೆ ಆಟೋ ಮಗುಚಿ ಬಿದ್ದು ನಜ್ಜುಗುಜ್ಜಾಗಿದೆ.ಕಾರಿಗೂ ಹಾನಿಯಾಗಿದೆ ಎನ್ನಲಾಗಿದೆ.
- Advertisement -


