Wednesday, June 3, 2026
Homeಕರಾವಳಿಮಂಗಳೂರುಮಂಗಳೂರು; ವೈಯಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ ವಂಚನೆ; ಆರೋಪಿಯ ಬಂಧನ

ಮಂಗಳೂರು; ವೈಯಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ ವಂಚನೆ; ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ವೈಯಕ್ತಿಕ ಸಮಸ್ಯೆಗಳನ್ನು ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ದಕ್ಷಿಣಕನ್ನಡ ಜಿಲ್ಲಾ  ಸೈಬರ್‌ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ವಾಸುದೇವ ಆರ್‌ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸಾರ್ವಜನಿಕರಿಗೆ ವೈಯಕ್ತಿಕ ಸಮಸ್ಯೆಗಳನ್ನು ತತ್‌ಕ್ಷಣದಲ್ಲಿ ಪೂಜೆ ಮಾಡಿ ಪರಿಹರಿಸುವುದಾಗಿ ಜಾಹೀರಾತು ನೀಡಿದ್ದ. ಅಲ್ಲದೇ ವ್ಯಕ್ತಿಯೊಬ್ಬರಿಗೆ ಸುಮಾರು 24,78,274/- ರೂ ವಂಚಿಸಿದ್ದ.

ಘಟನೆಗೆ ಸಂಬಂಧಿಸಿದಂತೆ  ದಕ್ಷಿಣ  ಕನ್ನಡ ಜಿಲ್ಲಾ  ಸೈಬರ್‌  ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  ಬಂಧಿತನಿಂದ ಕೃತ್ಯಕ್ಕೆ ಬಳಸಿದ 4 ಮೊಬೈಲ್‌ ಫೋನ್‌ಗಳು ಹಾಗೂ ರೂ 20,300/- ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿದ್ದು, ಒಟ್ಟು 1,60,300/ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!