Friday, June 5, 2026
Homeಕರಾವಳಿವಿಟ್ಲ: ಬಸ್ ಹಾಗೂ ಬೈಕ್ ನ ನಡುವೆ ಡಿಕ್ಕಿ, ಯುವಕನಿಗೆ ಗಂಭೀರ ಗಾಯ

ವಿಟ್ಲ: ಬಸ್ ಹಾಗೂ ಬೈಕ್ ನ ನಡುವೆ ಡಿಕ್ಕಿ, ಯುವಕನಿಗೆ ಗಂಭೀರ ಗಾಯ

- Advertisement -
- Advertisement -

ವಿಟ್ಲ: ಬಸ್ ಹಾಗೂ ಬೈಕ್ ನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವ ಘಟನೆ ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ನಡೆದಿದೆ.

ಬೈಕ್ ಸವಾರ ಕೂವೆತ್ತಿಲ ನಿವಾಸಿ ಟ್ಯಾಂಕರ್ ಚಾಲಕ ಜಗ್ಗ ಯಾನೆ ಜಗದೀಶ್ ಗೌಡ(28 ವ.)ರವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.

ಬಿ.ಸಿ.ರೋಡಿಂದ ಪುತ್ತೂರಿಗೆ ಹೋಗುತ್ತಿದ್ದ ತೆರಳುತ್ತಿದ್ದ ಬಸ್ಸ್ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಮಧ್ಯೆ ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಮುಂಭಾಗದಲ್ಲಿ ಅಡಿಭಾಗಕ್ಕೆ ನುಸುಳಿ ಸಿಲುಕಿಕೊಂಡಿದೆ. ಜಗದೀಶ್ ರವರು ಒಂದು ವಾರದ ಹಿಂದಷ್ಟೇ ತನ್ನ ಸ್ನೇಹಿತ ಖರೀದಿಸಿದ್ದ ಹೊಸ ಬೈಕಲ್ಲಿ ಕಬಕಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಸ್ಥಳೀಯರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡಿದೆ.

- Advertisement -

Latest News

error: Content is protected !!