Friday, June 5, 2026
Homeಕರಾವಳಿಉಡುಪಿಉಡುಪಿ: ಕಾರು ಡಿಕ್ಕಿಯಾಗಿ ಆರು ಮಂದಿಗೆ ಗಾಯ

ಉಡುಪಿ: ಕಾರು ಡಿಕ್ಕಿಯಾಗಿ ಆರು ಮಂದಿಗೆ ಗಾಯ

- Advertisement -
- Advertisement -

ಉಡುಪಿ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಆರು ಜನ ಮೆಸ್ಕಾಂ ವಿದ್ಯುತ್ ಕಂಬ ಅಳವಡಿಸುವ ಕೆಲಸ ಮಾಡುತ್ತಿದ್ದವರು ಗಾಯಗೊಂಡ ಘಟನೆ ಶಿರ್ವ ಗ್ರಾಮದ ನ್ಯಾರ್ಮ ಸೇತುವೆ ನಡೆದಿದೆ.

ಪ್ರಮೋದ್ ಸಲಾಮ್, ಜಗದೀಶ್ ಸುಧೀರ್ ಕುಮಾರ್, ಜಗದೀಶ್ ಕುಮಾರ್ ಕುಮೇತಿ, ಸೋನಾ ರಾಮ್ ಸೇತಾಮ್, ಕಲಿರಾಮ್ ಮಾಂಡವಿ ಗಾಯಗೊಂಡವರು.

12 ಮಂದಿ ಕೆಲಸಗಾರರು ಹೊಸ ವಿದ್ಯುತ್ ಕಂಬವನ್ನು ಎತ್ತಿಕೊಂಡು ರಸ್ತೆ ದಾಟುವಾಗ ಬಂಟಕಲ್ ಕಡೆಯಿಂದ ಬಂದ ಕಾರು ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ವಿದ್ಯುತ್ ಕಂಬ ಕಾರಿನ ಮೇಲೆ ಬಿದ್ದು ಜಖಂಗೊಂಡಿದ್ದು, ವಿದ್ಯುತ್ ಕಂಬ ತುಂಡಾಗಿ 8 ಸಾವಿರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಆರು ಮಂದಿ ಕೆಲಸಗಾರರು ಗಾಯಗೊಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!